ಜಿಲ್ಲೆ

ಶ್ರೀ ರೇಣುಕರ ಸಂದೇಶ ಸಾರ್ವಕಾಲಿಕ

ಲಕ್ಷ್ಮೇಶ್ವರ: ವೀರಶೈವ ಧರ್ಮದ ಮಹತ್ವವನ್ನು ಭಕ್ತರಿಗೆ ತಿಳಿಸಲು ಭೂಮಿಗೆ ಅವತರಿಸಿದ ಯುಗಪುರುಷ ರೇಣುಕರು ನೀಡಿದ ಸಂದೇಶ ಸರ್ವಕಾಲಕ್ಕೂ ಸತ್ಯವಾಗಿ ಉಳಿದಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮೇಶ್ವರ ದೇವಸ್ಥಾನದ ಪುರಾಣ ಸೇವಾ ಸಮಿತಿಯಿಂದ ಶ್ರಾವಣ ಮಾಸದಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇಣುಕ ವಿಜಯ ಪುರಾಣ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಇಂದಿನ ತಾಂತ್ರಿಕ ಯುಗದಲ್ಲಿ ಟಿವಿ, ಕಂಪ್ಯೂಟರ್, ಸಿನಿಮಾ ಮಾಧ್ಯಮಗಳ ಪ್ರಭಾವಕ್ಕೊಳಗಾಗಿ ಕೆಲವರು ಖಿನ್ನತೆಯಿಂದ ಬಳಲುತ್ತ, ನಮ್ಮ ಸಂಸ್ಕೃತಿ, ಆಚಾರ-ವಿಚಾರ, ಧರ್ಮಾಚರಣೆ ಮರೆಯುತ್ತಿರುವುದು ವಿಷಾದದ ಸಂಗತಿ ಎಂದರು. ಬಸವೇಶ್ವರ ಮಹಾಂತಶೆಟ್ಟರ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ್, ಬಸವರಾಜ ಮೆಣಸಿನಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಕಾಶಪ್ಪ ಮುಳಗುಂದ, ನಂದೀಶ ಬಂಡಿವಾಡ, ಶಿವಪುತ್ರಪ್ಪ ಚಾಕಲಬ್ಬಿ, ಜಿ.ಜಿ. ಹಾಲೇವಾಡಿಮಠ, ಎನ್.ಆರ್. ಸಾತಪೂತೆ, ಮುದಕಣ್ಣ ಗೊರವರ, ಜಯಪ್ರಕಾಶ ಹೊಟ್ಟಿ, ವಿರೂಪಾಕ್ಷಪ್ಪ ಆದಿ, ಮಯೂರ ಪಾಟೀಲ, ಎಂ.ಕೆ. ಕಳ್ಳಿಮಠ, ಪಾರ್ವತಿ ಕಳ್ಳಿಮಠ, ಪುರಾಣ ಪಠಣಕಾರ ವಿರೂಪಾಕ್ಷ ಗವಾಯಿಗಳು, ಪ್ರವಚನಕಾರ ಎಸ್.ಎಫ್.ಆದಿ, ಕಳಕಲ್ಲ ಮುದ್ನಾಪೂರ ಇದ್ದರು. ಗಂಗಾಧರ ಗುಡಗೇರಿ, ಸ್ನೇಹಾ ಹೊಟ್ಟಿ ನಿರೂಪಿಸಿದರು.