ಜಿಲ್ಲೆ

ಶ್ರೀರಾಮನ ಪೂಜೆಯಲ್ಲಿ ಪ್ರತ್ಯಕ್ಷನಾದ ಹನುಮ

Gadag - Shivanand Hiremath

ಗದಗ: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಜಿಲ್ಲೆಯ ಲೆ$್ಮಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ಹೋಮ ಮಾಡುತ್ತಿದ್ದ ವೇಳೆ ಹನುಮ(ಮಂಗ) ಹೋಮ ಮಾಡುವ ಸ್ಥಳದಲ್ಲೇ ಬಂದು ಕುಳಿತ ಹಿನ್ನೆಲೆ ನೆರೆದ ಜನ ಆಶ್ಚರ್ಯ ಪಡುವಂತಾಯಿತು. ಶ್ರೀ ರಾಮ ಹಾಗೂ ಮಾರುತಿ ದೇವರ ಪೂಜೆ ವೇಳೆ ದಿಢೀರ ಪ್ರತ್ಯಕ್ಷವಾದ ಹನುಮ ಹೋಮ ಮುಗಿಯುವ ವರೆಗೂ ಸ್ಥಳದಲ್ಲೇ ಇದ್ದು ಅಚ್ಚರಿ ಮೂಡಿಸಿತು. ಯಜ್ಞದ ಸಮಯದಲ್ಲಿ ಮಂಗಮೊಂದು ಮಾರುತಿ ರೂಪದಲ್ಲಿ ಬಂದಿದೆ ಎಂದು ನೆರದ ಜನರು ಕೈಮುಗಿದು ಭಕ್ತಿ ಸರ್ಮಪಿಸಿದರು.