ಜಿಲ್ಲೆ

ಪದವಿಪೂರ್ವ ಕಾಲೇಜ್ ಕಟ್ಟಡದ ಭೂಮಿಪೂಜೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಲಕ್ಷೆ್ಮೕಶ್ವರ: ಪಟ್ಟಣದ ಕಮಲಾ ಮತ್ತು ವೆಂಕಪ್ಪ ಎಂ. ಅಗಡಿ ಪದವಿಪೂರ್ವ ಕಾಲೇಜಿನ ಕಟ್ಟಡ ನಿರ್ವಣದ ಭೂಮಿ ಪೂಜೆ ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ರಘು ಬೆಳಗೋಡು ಹಾಗೂ ಪಾತ್ರೆ ಪ್ರಭಾಕರ ಶೆಟ್ಟಿ ದಂಪತಿ ಬುಧವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೂ ಮಹಾನಗರಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಲಕ್ಷೆ್ಮೕಶ್ವರದ ಶಿಕ್ಷಣ ಪ್ರೇಮಿ ದಿ. ಶ್ರೀ ವೆಂಕಪ್ಪ ಎಂ. ಅಗಡಿ ಅವರು ಕಟ್ಟಿ ಬೆಳೆಸಿದ ಇಂಜಿನಿಯರಿಂಗ್ ಕಾಲೇಜು ಇಂದು ಶ್ರೇಷ್ಠತೆಗೆ ಹೆಸರಾಗಿದೆ. ಇದಕ್ಕೆ ಪೂರಕವೆಂಬಂತೆ ಪದವಿಪೂರ್ವ ಶಿಕ್ಷಣ ನೀಡಬೇಕೆಂಬ ಹಂಬಲದಿಂದ ತಂದೆಯ ದಾರಿಯಲ್ಲಿಯೇ ಹರ್ಷವರ್ಧನ ಅಗಡಿ ದಂಪತಿ ಗುಣಮಟ್ಟ, ಹೊಸತನ, ಶಿಸ್ತಿನ ಶಿಕ್ಷಣದೊಂದಿಗೆ ಪಿಯುಸಿ ಶಿಕ್ಷಣ ಆರಂಭಿಸಿ ಕಾಲೇಜಿನ ಕ್ಯಾಂಪಸ್​ನಲ್ಲಿಯೇ ಪ್ರತ್ಯೇಕವಾದ ಸುಸಜ್ಜಿತ ಪಿಯು ಕಾಲೇಜು ಕಟ್ಟಡ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ಎಸ್​ಎಸ್​ಎಲ್​ಸಿ ನಂತರ ಪಿಯು ಶಿಕ್ಷಣಕ್ಕಾಗಿ ದೂರದೂರಿಗೆ ಹೋಗದೇ ತಮ್ಮ ಊರಲ್ಲಿಯೇ ಶಿಕ್ಷಣ ಪಡೆಯಲು ಅನಕೂಲವಾಗಲಿದೆ. ಅಗಡಿ ಅವರು ಬಡವರು ಮತ್ತು ಮಧ್ಯಮ ವರ್ಗದ ಜನರ ಅನುಕೂಲದ ಜತೆಗೆ ಶಿಕ್ಷಣ, ಆರೋಗ್ಯ, ಧಾರ್ವಿುಕ ಕ್ಷೇತ್ರದಲ್ಲಿ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯಾರ್ಹ ಎಂದರು.

ಭೂಮಿಪೂಜಾ ಕಾರ್ಯಕ್ರಮದಲ್ಲಿ ಅನಿತಾ ರಘು ಬೆಳಗೋಡ, ಲಕ್ಷ್ಮೀ ಪ್ರಭಾಕರ ಶೆಟ್ಟಿ, ಅಗಡಿ ಇಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯ ಪರಶುರಾಮ ರ್ಬಾ, ಪಪೂ ವಿಭಾಗದ ಪ್ರಾಚಾರ್ಯ ಡಾ. ಎನ್ ಹಯವದನ, ಆಡಳಿತಾಧಿಕಾರಿ ವಿಕ್ರಮ ಶಿರೋಳ, ರವಿಪ್ರಕಾಶ, ಅಗಡಿ ಸನ್​ರೈಸ್ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಜಶೇಖರ ಮೂಲಿಮನಿ, ಡಾ. ಸುಜಾತಾ ಸಂಗೂರ, ಆರ್ಕಿಟೆಕ್ಚರ್ ನಳಿನಿ ಕೆಂಭಾವಿ, ಅಧ್ಯಾಪಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.