ಸಿದ್ದೇಶ್ವರ ಪಿಕೆಪಿಎಸ್ ಅಧ್ಯಕ್ಷರಾಗಿ ಲಕ್ಷ್ಮಪ್ಪ ಹೋಟಿ ಹಾಗೂ ಗೂಡುಸಾಬ್ ದೊಡಮನಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.ಎಂ.ಎಸ್.ಗೌಡಪ್ಪನವರ, ಸಿದ್ಧಾರೂಢ ಬಿಲಕಂಚಿ, ಮಹಾದೇವಿ ಪಚ್ಚೆದ ಇತರರಿದ್ದರು. 
ಜಿಲ್ಲೆ

ಲಕ್ಷ್ಮಪ್ಪ ಅಧ್ಯಕ್ಷ, ಗೂಡುಸಾಬ್ ಉಪಾಧ್ಯಕ್ಷ

ಪ್ರಶಾಂತ ಹೂಗಾರ

ತಲ್ಲೂರ: ಸಮೀಪದ ಮದ್ಲೂರ ಶ್ರೀರಂಗಪುರ ಗ್ರಾಮದ ಶ್ರೀ ಸಿದ್ದೇಶ್ವರ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘಕ್ಕೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಲಕ್ಷ್ಮಪ್ಪ ಹೋಟಿ ಅಧ್ಯಕ್ಷರಾಗಿ, ಗೂಡುಸಾಬ್ ದೊಡಮನಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಸವದತ್ತಿ ತಾಲೂಕು ಸಹಕಾರ ಅಭಿವದ್ಧಿ ಅಧಿಕಾರಿ ಎಂ.ಎಸ್.ಗೌಡಪ್ಪನವರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸನ್ಮಾನ ಸ್ವೀಕರಿಸಿ ಅಧ್ಯಕ್ಷ-ಉಪಾಧ್ಯಕ್ಷರು ಮಾತನಾಡಿ, ಆಡಳಿತ ಮಂಡಳಿ ಸಹಕಾರದೊಂದಿಗೆ ಬ್ಯಾಂಕಿನ ಅಭಿವದ್ಧಿಗೆ ಶ್ರಮಿಸಲಾಗುವುದು ಎಂದರು.

ನೂತನ ನಿರ್ದೇಶಕರಾದ ಸಿದ್ಧಾರೂಢ ಬಿಲಕಂಚಿ, ಪುಂಡಲೀಕ ಉಪ್ಪಾರ, ಶ್ರೀಕಾಂತ ನಾಯ್ಕರ, ಸಂಗಪ್ಪ ನಾಗನೂರ, ಅಶೋಕ ದೇಶನೂರ, ಕರೆವ್ವ ಗೌಡರ, ಮಹಾದೇವಿ ಪಚ್ಚೆದ, ತುಕಾರಾಮ ಸುಣಗಾರ, ಚಂದ್ರಪ್ಪ ಮಾದರ, ಈರಪ್ಪ ತಳವಾರ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ ಪಚ್ಚಿನವರ, ಮುಖಂಡ ಮಲ್ಲಪ್ಪ ಶಿರೆಪ್ಪನವರ, ಸುರೇಶ ಹೋಟಿ, ಶೆಟ್ಟೆಪ್ಪ ಕುರಿ, ಅಡಿವೆಪ್ಪ ಹೊಸಮನಿ, ವಿಠ್ಠಲ ಪಚ್ಚಿನವರ ಇತರರಿದ್ದರು.