ಜಿಲ್ಲೆ

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಉಳ್ಳಾಲ ಶಾಖೆಯ ಸ್ಥಳಾಂತರ

Mangaluru - Hariprasad Rai


ಮಂಗಳೂರು : ಶ್ರೀಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಉಳ್ಳಾಲ ಶಾಖೆಯು ಕೋಟೆಕಾರು ಬೀರಿಯ ಶ್ರೀ ಭಗವತೀ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡಿದೆ. ಸಂಘದ ಅಧ್ಯಕ್ಷ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ದೀಪ ಬೆಳಗಿ ಸ್ಥಳಾಂತರಿತ ಶಾಖೆಯ ಉದ್ಘಾಟನೆ ನೆರವೇರಿಸಿದರು.
ರಾಮ ರಾಜ ಕ್ಷತ್ರಿಯ ಸಂಘ ಉಳ್ಳಾಲ ಇದರ ಅಧ್ಯಕ್ಷ ಮಾಧವ ರಾವ್ ಸಿ.ಎಚ್., ಶಾಖಾ ಕಟ್ಟಡದ ಮಾಲೀಕ ಸುನಿಲ್ ಜೆ. ಉಚ್ಚಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ದಿನೇಶ್ ರಾವ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಪ್ರಭಾರ) ಎನ್. ಸಂದೇಶ್, ಶಾಖಾ ವ್ಯವಸ್ಥಾಪಕ ಮನೋಜ್, ನಿರ್ದೇಶಕರಾದ ರಾಮಚಂದ್ರ ಕೆ.ಎಸ್., ಜೆ. ಕೃಷ್ಣಾನಂದ ರಾವ್, ಡಾ. ಜೆ. ರವೀಂದ್ರ, ಡಾ. ಎಚ್. ಪ್ರಭಾಕರ್, ಕೆ.ಎಸ್. ರಂಜನ್, ಕೆ. ರವೀಂದ್ರ, ಪಿ. ಬಾಬು, ವಾರಿಜ ಕೆ., ಡಾ. ಮಂಜುಳಾ ಎ. ರಾವ್, ಕೆ. ಜೈರಾಜ್ ಉಪಸ್ಥಿತರಿದ್ದರು.