ಮಂಗಳೂರು : ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 27ನೇ ವಾರ್ಷಿಕ ಮಹಾಸಭೆ ನಗರದ ಜೆಪ್ಪುವಿನ ರಾಮಕ್ಷತ್ರಿಯ ಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜೆ. ಕೃಷ್ಣ ಪಾಲೆಮಾರ್ ಮಾತನಾಡಿ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘವು ತನ್ನ ಸದಸ್ಯರ ಸಂಪೂರ್ಣ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘವು 2023-24ನೇ ಸಾಲಿನಲ್ಲಿ 1.49 ಕೋಟಿ ರೂ.
ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 20 ಡಿವಿಡೆಂಡ್ ನೀಡಲಾಗುವುದು ಎಂದರು.
ಸಹಕಾರ ಸಂಘ ಸಾಲ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡಿಯೂ ಅಧಿಕ ಲಾಭ ಗಳಿಸಿದೆ. ಸಂಘದಲ್ಲಿ 5971 ಸದಸ್ಯರಿದ್ದು, 2,09,55,260 ರೂ. ಪಾಲು ಬಂಡವಾಳ ಹೊಂದಿದೆ. ಠೇವಣಿ ಸಂಗ್ರಹಣೆಯಲ್ಲೂ ಸಂಘವು ಗಮನಾರ್ಹ ಸಾಧನೆ ಮಾಡಿದೆ. ಕಳೆದ ವರ್ಷಾಂತ್ಯಕ್ಕೆ ಠೇವಣಿ 80,72,31,994.19ರೂ.ನಿಂದ ವರದಿ ವರ್ಷದಲ್ಲಿ 88,73,03,990.16 ರೂ.ಗೆ ಏರಿಕೆಯಾಗಿದೆ. ಸಾಲ ಮುಂಗಡದಲ್ಲೂ 78,80,70,333.00 ರೂ.ನಿಂದ 86,97,86,156.00 ರೂ. ಗೆ ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರ 3,89,96,90,561.91 ರೂ.ಆಗಿದೆ ಎಂದು ಜೆ. ಕೃಷ್ಣ ಪಾಲೆಮಾರ್ ತಿಳಿಸಿದರು.
ಸಂಘದ ಸ್ವಂತ ಆಡಳಿತ ಕಚೇರಿಯನ್ನು ತೆರೆಯಲಾಗಿದೆ. ಗ್ರಾಹಕರ ಸೌಲಭ್ಯಕ್ಕೆ ಪ್ರಧಾನ ಕಚೇರಿಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಅಳವಡಿಕೆಯಾಗಿದೆ. ಸಂಘದ ವೆಬ್‌ಸೈಟ್ ಹಾಗೂ ಸಹಕಾರಿ ಆ್ಯಪ್ ಅಳವಡಿಸಲಾಗಿದ್ದು, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದೆ . ಸಂಘವು ಅಂತರ್ ಜಿಲ್ಲಾ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಶಾಖೆ ತೆರೆಯಲು ಯೋಜನೆ ಹಮ್ಮಿಕೊಂಡಿದೆ. ಸದ್ಯದಲ್ಲೇ ಪುತ್ತೂರಿನಲ್ಲಿ ಶಾಖೆ
ತೆರೆಯಲಾಗುವುದು. ಸಂಘವು ಸತತ 4ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ ಪಡೆದಿದೆ ಎಂದು ಅವರು ತಿಳಿಸಿದರು.
ಪ್ರಭಾರ ಸಿಇಒ ಸಂದೇಶ್ ಎನ್.ಲೆಕ್ಕ ಪತ್ರ ಮಂಡಿಸಿದರು. ಸಂಘದ ನಿರ್ದೇಶಕರಾದ ಚಂದನ್ ಕೋಟೆಕಾರ್, ರಾಮಚಂದ್ರ ಕೆ.ಎಸ್, ಎ. ಬಾಬು, ವಾರಿಜ ಕೆ, ಡಾ.ಮಂಜುಳಾ ಎ ರಾವ್, ಕೆ. ರವೀಂದ್ರ, ಜೈರಾಜ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ದಿನೇಶ್‌ರಾವ್ ಸ್ವಾಗತಿಸಿ, ನಿರ್ದೇಶಕ ರಂಜನ್ ಕೆ.ಎಸ್.ವಂದಿಸಿದರು.