ಗುಳೇದಗುಡ್ಡ: ದೇಶದಲ್ಲಿ ನಡೆಯುತ್ತಿರುವ ಮಹತ್ವದ ಪ್ರಕರಣಗಳ ಅಧ್ಯಯನ ಮಾಡುವ ಮೂಲಕ ವೃತ್ತಿ ಕೌಶಲ ವೃದ್ಧಿಸಿಕೊಂಡು ವಾದಮಾಡುವ ನ್ಯಾಯವನ್ನು ಕಾಪಾಡಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ನ್ಯಾಯಾಧೀಶ ಡಿ.ವೈ. ಬಸಾಪೂರ ಹೇಳಿದರು.
ಪಟ್ಟಣದ ನ್ಯಾಯವಾದಿಗಳ ಸಂಘದ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯವಾದಿಗಳು ಹೊಸ ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದರು.
ವಕೀಲ ವೃತ್ತಿಗೆ ವಯಸ್ಸಿನ ಮಿತಿ ಇಲ್ಲ. ಕಿರಿಯ ವಕೀಲರು ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಿ, ಅನುಭವ ಪಡೆದುಕೊಳ್ಳಬೇಕು. ಹಿರಿಯ ವಕೀಲರಿಂದ ಸಲಹೆ ಪಡೆಯಬೇಕು ಎಂದು ಯುವ ನ್ಯಾಯವಾದಿಗಳಿಗೆ ಕಿವಿ ಮಾತು ಹೇಳಿದರು.
ತಹಸೀಲ್ದಾರ್ ಮಂಗಳಾ ಗುಳೇದಗುಡ್ಡದ, ಜೆಎಂಎ್ಸಿ ಸಂಚಾರಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಂಜುಕುಮಾರ ಪಾಶ್ಚಾಪುರೆ, ಹೆಚ್ಚುವರಿ ನ್ಯಾಯಾಧೀಶ ಮಧುಸೂದನ, ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಬರಾಣಪುರ ಮಾತನಾಡಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್. ಮಿಠ್ಠಲಕೋಡ, ನ್ಯಾಯವಾದಿಗಳಾದ ಎಸ್.ವೈ. ಹೊಸಮನಿ, ಕೆ.ಆರ್. ರಾಯಚೂರ, ಜೆ.ಐ. ಮೇಟಿ, ಅರುಣ ಉದ್ನೂರ, ಕೃಷ್ಣಸಾ ಪವಾರ, ಗಂಗಾಧರ ರಾಂಪೂರ, ಶಕೀಲ ಕಂಟ್ರಾಕ್ಟರ್, ತಮ್ಮಣ್ಣೆಪ್ಪ ಬೆನಕಟ್ಟಿ, ಆರ್.ಎಂ. ಅಲದಿ, ಎಂ.ಎಂ. ಎಣ್ಣಿ, ಜಿ.ಎಸ್. ಕೊರ್ತಿ, ಎಲ್.ಎಂ. ಗೌಡರ, ಎನ್.ಆರ್. ಅಂಕದ, ಪುಂಡಲೀಕ ಬಡಿಗೇರ ಮತ್ತಿತರಿದ್ದರು.