ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸಮಾಜದಲ್ಲಿರುವ ನ್ಯೂನತೆಗಳನ್ನು ತಿದ್ದು ಮಹತ್ತರ ಜವಾಬ್ದಾರಿ ವಕೀಲರ ಸಂಘಕ್ಕಿದೆ. ನ್ಯಾಯಾಂಗಕ್ಕೆ ವಕೀಲರ ಸಂಘವೇ ಧ್ವನಿ. ಈ ವಿಚಾರದಲ್ಲಿ ಕುಂದಾಪುರ ವಕೀಲರ ಸಂಘ ಮಾದರಿ ನಡೆ ಅನುಸರಿಸುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಹೇಳಿದರು.
ಕುಂದಾಪುರದ ರೋಟರಿ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕುಂದಾಪುರ ಬಾರ್ ಅಸೋಸಿಯೇಶನ್ ಪದಾಧಿಕಾರಿಗಳ ಪದ ಸಂಭ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬಾರ್ ಅಸೋಸಿಯೇಶನ್ ನೂತನ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಅವರಿಗೆ ನಿರ್ಗಮಿತ ಅಧ್ಯಕ್ಷ ಹಂದಟ್ಟು ಪ್ರಮೋದ ಹಂದೆ ಅಧಿಕಾರ ಹಸ್ತಾಂತರಿಸಿದರು. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣನವರ್, ವಕೀಲರಾದ ಮಾಧವ ರಾವ್ ಮಟ್ಟಿ, ಎ.ಬಾಲಕೃಷ್ಣ ಶೆಟ್ಟಿ, ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಉದಯ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಎಂ.ಸಂತೋಷ್ ಆಚಾರ್, ಜತೆ ಕಾರ್ಯದರ್ಶಿ ಜೆ. ಗೋವಿಂದ ನಾಯ್ಕ, ಕೋಶಾಧಿಕಾರಿ ಐ.ನಾಗರಾಜ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಟಿ.ಬಿ.ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಚರಣ್ ನಾವಡ, ರಮೀಝಾ ನಿರೂಪಿಸಿದರು. ರವಿಕಿರಣ್ ಮುರ್ಡೇಶ್ವರ, ಬನ್ನಾಡಿ ಸೋಮನಾಥ ಹೆಗ್ಡೆ, ಕೆ.ಬಿ.ಶೆಟ್ಟಿ, ವಿಕಾಸ ಹೆಗ್ಡೆ ಸಹಕರಿಸಿದರು.
ಜಿಲ್ಲಾ ನಿವೃತ್ತ ನ್ಯಾಯಾಧೀಶ ಎಂ.ದೇವರಾಜ್ ಭಟ್, ಹಿರಿಯ ವಕೀಲರಾದ ಪಿ.ಶ್ರೀಧರ ರಾವ್, ಜಿ.ಸಂತೋಷ ಕುಮಾರ್ ಶೆಟ್ಟಿ, ಎಚ್.ಮೋಹನದಾಸ್ ಶೆಟ್ಟಿ, ಎಂ.ಸದಾನಂದ ಶೆಟ್ಟಿ, ಶಿರಿಯಾರ ಮುದ್ದಣ್ಣ ಶೆಟ್ಟಿ, ಗಿಳಿಯಾರು ರಾಮಣ್ಣ ಶೆಟ್ಟಿ, ಎಂ.ಭಾಸ್ಕರ ಶೆಟ್ಟಿ ಅವರನ್ನು ವಕೀಲ ಸಂಘದ ವತಿಯಿಂದ ಸನ್ಮಾನಿಸಲಾಯಿತು.