ಜಿಲ್ಲೆ

ವಕೀಲರ ಮೇಲಿನ ಹಲ್ಲೆಗೆ ಖಂಡನೆ

ಜಿ.ಹೆಚ್. ಧನ್ಯಕುಮಾರ್

ಕಡೂರು: ಭಾರತೀಯ ವಕೀಲ ಪರಿಷತ್‌ನ ಉಪಾಧ್ಯಕ್ಷ ವೈ.ಆರ್. ಸದಾಶಿವರೆಡ್ಡಿ ಮೇಲೆ

ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ತಾಲೂಕು

ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಗೋವಿಂದಸ್ವಾಮಿ ಒತ್ತಾಯಿಸಿದರು.

ಮಕೀಲರ ಮೇಲಿನ ಹಲ್ಲೆ ಖಂಡಿಸಿ ತಾಲೂಕು ಕಚೇರಿಯಲ್ಲಿ ವಕೀಲರ ಸಂಘದಿಂದ ಕೆಂಪು

ಪಟ್ಟಿಧರಿಸಿ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿ, 16 ರಂದು ಸದಾಶಿವರೆಡ್ಡಿ ಅವರ

ನಿವಾಸದ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ ಮಾರಾಣಾಂತಿಕ ಹಲ್ಲೆ

ನಡೆಸಿದ್ದಾರೆ. ಈಗಾಗಲೇ ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ ದುಷ್ಕರ್ಮಿಗಳು

ಕಾನೂನಿನ ಭಯ ಇಲ್ಲದೇ ಕೃತ್ಯ ಎಸಗಿದ್ದಾರೆ. ಜನತೆಗೆ ನ್ಯಾಯ ಒದಗಿಸುವಲ್ಲಿ

ಕಾರ್ಯಪ್ರವೃತ್ತರಾದ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡನೀಯ. ಈಗಾಗಲೇ

ವಕೀಲರ ಸಮುದಾಯದಲ್ಲಿ ಆತಂಕ ಸೃಷ್ಟಿಯಾಗಿದ್ದು, ಸರ್ಕಾರ ವಕೀಲರ ರಕ್ಷಣೆಗೆ

ಮುಂದಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ

ಎಚ್ಚರವಹಿಸಬೇಕು. ಹಲ್ಲೆ ಮಾಡಿದ ದುಷ್ಕರ್ಮಿವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು

ಆಗ್ರಹಿಸಿದರು.

ಸಂಘದಿಂದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾಗೆ ಮನವಿ ಸಲ್ಲಿಸಲಾಯಿತು. ವಕೀಲರ

ಸಂಘದ ಉಪಾಧ್ಯಕ್ಷ ಬಿ.ಆರ್.ಹರೀಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್,

ಹಿರಿಯ ವಕೀಲರಾದ ಸಿ.ಎಲ್.ದೇವರಾಜ್, ಕೆ.ಪಿ.ನೀಲಕಂಠಪ್ಪ, ಕೆ.ಎಂ.ಜಯಣ್ಣ, ರಾಜಣ್ಣ,

ಎಂ.ಎಸ್.ಹೆಳವಾರ್, ಸಿ.ಕೆ.ಮಂಜುನಾಥ್, ಕೆ.ಎನ್.ಮಂಜುನಾಥ್, ಎಸ್.ಕೆ.ನಾಗರಾಜ್,

ಸಂತೋಷ್, ಶಿವಕುಮಾರ್ ಮತ್ತಿತರಿದ್ದರು.