ಜಿಲ್ಲೆ

ಕಠಿಣ ಕ್ರಮ ಕೈಗೊಳ್ಳಲು ವಕೀಲರ ಮನವಿ

ಮುಂಡಗೋಡ: ವಕೀಲರ ಸಂಘದ ಸದಸ್ಯನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ಸಿಪಿಐ. ಬಿ.ಎಸ್. ಲೋಕಾಪುರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಸಂಘದ ಸದಸ್ಯ ಅನೀಲ ದಡ್ಡಿ ಅವರ ಮೇಲಿನ ಹಲ್ಲೆ ಖಂಡನೀಯ. ತಪ್ಪಿಸ್ಥತರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಕ್ರಿಯಿಸಿದ ಸಿಪಿಐ, ಮಂಗಳವಾರ ರಾತ್ರಿಯೇ ಪ್ರಕರಣ ದಾಖಲಿಸಲಾಗಿದೆ. ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ನಟರಾಜ ಕಾತೂರ, ರಾಜು ಹಂಚಿನಮನಿ, ರಾಜಶೇಖರ ಹುಬ್ಬಳ್ಳಿ, ಗುಡ್ಡಪ್ಪ ಕಾತೂರ, ರಾಘವೇಂದ್ರ ಮಳಗಿಕರ, ನಂದೀಶ ಲಿಂಬಾಯಿ, ಮಹಮ್ಮದಸಲೀಂ ನಂದಿಕಟ್ಟಿ, ನಾರಾಯಣ ಸಣ್ಣಳ್ಳಿಮನಿ, ವಿಶ್ವನಾಥ ಪವಾಡಶೆಟ್ಟರ, ಪ್ರಮೋದ ಸಣ್ಣಮನಿ, ಕಲ್ಮೇಶ ಭೋವಿ, ರಮೇಶ ಮಾಳೇಕರ ಇತರರು ಇದ್ದರು.