ಯಾದಗಿರಿ: ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಹಾಪಕಾಮ್ಸ್ನಿಂದ ವ್ಯವಸ್ಥೆ ಮಾಡಲಾಗಿರುವ ವಾಹನಗಳಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಿಧಿಸಿರುವ ಲಾಕ್ಡೌನ್ನಿಂದಾಗಿ ಜಿಲ್ಲೆಯ ರೈತರು ಬೆಳೆದಿರುವಂತಹ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಕಷ್ಟವಾಗಿರುವುದರಿಂದ ಕಲಬುರಗಿ ಮತ್ತು ಯಾದಗಿರಿ ಹಾಪಕಾಮ್ಸ್ ಸಂಸ್ಥೆಯಿಂದ ತಾತ್ಕಾಲಿಕವಾಗಿ 2 ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಆಸಕ್ತ ರೈತರು ವಾಹನಕ್ಕೆ ಇಂಧನದ ವ್ಯವಸ್ಥೆ ಮಾಡಿಕೊಂಡು ತಾವು ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟ ಮಾಡಿಕೊಳ್ಳುವಂತೆ ಕೋರಿದರು. ಕರೊನಾ ವೈರಸ್ ಕುರಿತು ಪ್ರತಿಯೊಬ್ಬ ರೈತರು ಎಚ್ಚರಿಕೆಯಿಂದ ಇರಬೇಕು. ಲಾಕ್ಡೌನ್ ಅವಧಿ ಮುಗಿಯುವವರೆಗೆ ಯಾರೂ ಅನಗತ್ಯವಾಗಿ ಮನೆಯಿಂದ ಹೊರ ಬರಕೂಡದು ಎಂದು ಸಲಹೆ ನೀಡಿದರು.
ಈಗಾಗಲೇ ಸರ್ಕಾರ ಲಾಕ್ಡೌನ್ನಲ್ಲಿ ಕೃಷಿ ವಲಯಕ್ಕೆ ಸಡಲಿಕೆ ನೀಡಿದೆ. ರೈತರು ಬೆಳೆದ ತರಕಾರಿ, ಹಣ್ಣು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ತಮ್ಮ ಬೆಳೆ ಹಾಳಾಗುತ್ತದೆ ಎಂದು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ರೈತರ ಸಹಾಯಕ್ಕೆ ತಾವು ಸದಾ ಇರಲಿದ್ದು ಸರ್ಕಾರ ಅನ್ನದಾತರೊಡನೆ ಸದಾ ಇದೆ ಎಂದು ಧೈರ್ಯ ತುಂಬಿದರು.
ಕಲಬುರಗಿ-ಯಾದಗಿರಿ ವಿಭಾಗ ಹಾಪಕಾಮ್ಸ್ ಅಧ್ಯಕ್ಷ ಸುರೇಂದ್ರನಾಥ ಸಜ್ಜನ್, ನಿದರ್ೇಶಕ ರಾಚಣ್ಣಗೌಡ ಮುದ್ನಾಳ್, ಎಫ್ಪಿಒ ಅಧ್ಯಕ್ಷ ಭೀಮರಾವ ಕಿಲ್ಲನಕೇರಾ ಧೋತ್ರೆ, ತೋಟಗಾರಿಕೆ ಉಪ ನಿದರ್ೇಶಕ ಮಲ್ಲಿಕಾಜರ್ುನ ಬಾಬು, ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ರವೀಂದ್ರ ಹಂಚಿನಾಳ ಇತರರು ಇದ್ದರು.