ವಕೀಲ ಮುನಿರಾಜುಗೆ ಪ್ರಾಣ ಬೆದರಿಕೆ ಒಡ್ಡಿದ ಆರೋಪಿಯನ್ನು ಬಂಧಿಸಲು ಒತ್ತಾಯಿಸಿ ಹೊಸಕೋಟೆ ನ್ಯಾಯಾಲಯಗಳ ಸಂಕೀರ್ಣದ ಬಳಿಯಲ್ಲಿ ವಕೀಲರು ಪ್ರತಿಭಟನೆ ನಡೆಸಿದರು. ಹಿರಿಯ ವಕೀಲರಾದ ಹರೀಂದ್ರ, ಮಾಜಿ ಅಧ್ಯ ವೆಂಕಟಸ್ವಾಮಿ, ಉಪಾಧ್ಯ ಕೆ.ವಿ.ರವಿಕುಮಾರ್​, ಜಂಟಿ ಕಾರ್ಯದರ್ಶಿ ಎಂ.ಆನಂದ್​, ಸದಸ್ಯರಾದ ಜಯಶ್ರೀ, ಸೇರಿ ಹಲ್ಲೆಗೆ ಒಳಗಾದ ಮುನಿರಾಜು ಮತ್ತು ವಕೀಲರ ಸಂದ ಪದಾಧಿಕಾರಿಗಳು ಇದ್ದರು. 
ಜಿಲ್ಲೆ

ವಕೀಲನಿಗೆ ಕದಾರನಿಂದ ಪ್ರಾಣ ಬೆದರಿಕೆ

ಹೊಸಕೋಟೆ: ಬೆಂಗಳೂರು ಜಿಲ್ಲಾಡಳಿತ ಭವನದ ನ್ಯಾಯಾಲಯದಲ್ಲಿ ಕದಾರರೊಬ್ಬರು ಹೊಸಕೋಟೆಯ ವಕೀಲರ ಸಂದ ಸದಸ್ಯ ಟಿ.ಕೆ.ಮುನಿರಾಜು ಅವರನ್ನು ಅವಾಚ್ಯವಾಗಿ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನಗರದ ನ್ಯಾಯಾಲಯಗಳ ಸಂಕೀರ್ಣದ ಬಳಿ ವಕೀಲರ ಸಂದಿಂದ ಪ್ರತಿಭಟನೆ ನಡೆಸಲಾಯಿತು. ನ್ಯಾಯಾಲಯದಲ್ಲಿಯೇ ಒಬ್ಬ ನ್ಯಾಯವಾದಿಗೆ ಪ್ರಾಣ ಬೆದರಿಕೆ ಹಾಕುವುದು ಅಕ್ಷಮ್ಯ. ವಕೀಲರಿಗೇ ಈ ಸ್ಥಿತಿ ಬಂದರೆ ಜನಸಾಮಾನ್ಯ ಗತಿಯೇನು ಎಂದು ತಾಲೂಕು ವಕೀಲರ ಸಂದ ಅಧ್ಯ ರಮೇಶ್​ ಪ್ರಶ್ನಿಸಿದರು. ಈ ಕುರಿತು ವಿಶ್ವನಾಥಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ವಕೀಲರ ಸಂದ ಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಅನ್ಯಾಯವನ್ನು ಅನುಭವಿಸುತ್ತಿರುವ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿ ಕೊಡುವ ವಕೀಲರ ಮೇಲೆ ನಡೆದಿರುವ ಹಲ್ಲೆ ನಿಜಕ್ಕೂ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಸವಾಲೆಸೆದಂತಿದೆ. ಪ್ರಕರಣದಲ್ಲಿನ ಮಹೇಂದ್ರ ಎಂಬಾತನನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.