ಜಿಲ್ಲೆ

ಕಲಬುರಗಿಯಲ್ಲಿ ಹಾಡುಹಗಲೇ ವಕೀಲನ ಬರ್ಬರ ಹತ್ಯೆ

ರಮೇಶ ಮೇಳಕುಂದಾ

ಕಲಬುರಗಿ: ನಗರದ ಸಾಯಿ ಮಂದಿರ ಬಳಿಯಿರೋ ಅಪಾರ್ಟ್ಮೆಂಟ್ ಬಳಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ ಮಾಡಲಾಗಿದೆ.

ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಉದನೂರ ಗ್ರಾಮದ ವಕೀಲ, ಈರಣ್ಣಗೌಡ ಪಾಟೀಲ್ (40) ಹತ್ಯೆಯಾದ ವ್ಯಕ್ತಿ.

ಜಮೀನು ವಿವಾದ ಸಂಬಂಧಿಸಿದಂತೆ ಸಂಬಧಿಕರಿಂದಲೇ ಹತ್ಯೆಯಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಗುಲ್ಬರ್ಗಾ ವಿವಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.