ಗಂಗಾವತಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಶರಣಬಸಪ್ಪ ನರಸಪ್ಪ ನಾಯಕ ನೇತೃತ್ವದ ತಂಡ ಜಯಗಳಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ನೂತನ ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಉಪಾಧ್ಯಕ್ಷ ಪ್ರಕಾಶ ಕುಸಬಿ, ವಕ್ತಾರ ಎ.ಜೆ.ರಂಗನಾಥ ಇತರರಿದ್ದರು. 
ಜಿಲ್ಲೆ

ವಕೀಲರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಗಂಗಾವತಿ: ನಗರದ ಜೆಎಂಎ್ಸಿ ಆವರಣದ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಶರಣಬಸಪ್ಪ ನರಸಪ್ಪ ನಾಯಕ ನೇತೃತ್ವದ ತಂಡ ಜಯಗಳಿಸಿದೆ.

ನೋಂದಾಯಿತ 371 ಸದಸ್ಯರಲ್ಲಿ 356 ಮಂದಿ ಮತಚಲಾಯಿಸಿದ್ದು, 11ಸ್ಥಾನಕ್ಕೆ 23 ಸದಸ್ಯರು ಪೈಪೋಟಿಯಲ್ಲಿದ್ದರು. ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ವರ್ಗದಲ್ಲಿ ಮಾಲತಿ ಮತ್ತು ಕವಿತಾಬಾಯಿ ಅವಿರೋಧ ಆಯ್ಕೆಯಾಗಿದ್ದರು.

ಉಳಿದ ಸ್ಥಾನಗಳಿಗೆ ಚುನಾವಣೆ ನಡೆದು ಅಧ್ಯಕ್ಷ ಶರಣಬಸಪ್ಪ ನರಸಪ್ಪ ನಾಯಕ 171 ಮತ, ಉಪಾಧ್ಯಕ್ಷ ಪ್ರಕಾಶ ಕುಸಬಿ 178, ಕಾರ್ಯದರ್ಶಿ ಎಚ್.ಎಂ. ಮಂಜುನಾಥ 229, ಜಂಟಿ ಕಾರ್ಯದರ್ಶಿ ಆರ್.ಜಿ.ಅರುಣಕುಮಾರ 145,

ಖಜಾಂಚಿ ಬಿ.ಪುಷ್ಪಾ ಶ್ರೀನಿವಾಸ 145, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನುಮಂತಪ್ಪ ಬಿ.ಆಲ್ವಿ 310, ಎಚ್.ನಾಗರಾಜ್ ನಾಯಕ 257, ಪ್ರಶಾಂತ ಕುಮಾರ 278 ಮತ್ತು ವೆಂಕಟೇಶ ಸಾಗರ 241 ಮತಗಳೊಂದಿಗೆ ಆಯ್ಕೆಯಾಗಿದ್ದಾರೆ.

ಚುನಾವಣೆ ಅಧಿಕಾರಿಗಳಾಗಿ ವಿರೂಪಾಕ್ಷಪ್ಪ ಭಾವಿಕಟ್ಟಿ, ವಿ.ಚಂದ್ರಶೇಖರ್ ಮತ್ತು ಶ್ರೀಕಾಂತ ನಾಯಕ ಕರ್ತವ್ಯ ನಿರ್ವಹಿಸಿದರು. ವಿಜೇತ ತಂಡ ಕೋರ್ಟ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿತು.