ಗಂಗಾವತಿ ರಾಯಚೂರು ರಸ್ತೆ ವಿದ್ಯಾನಗರದ ಬಳಿ ರೂಪಿಸಿರುವ ಆಟೋನಗರ ಕೈಗಾರಿಕೆ ವಿನ್ಯಾಸ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಗಾಲಿ ಜನಾರ್ದನರೆಡ್ಡಿ ವಿನ್ಯಾಸದ ಬಗ್ಗೆ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಯಿಂದ ಮಂಗಳವಾರ ಮಾಹಿತಿ ಪಡೆದರು. ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ, ಕೆಆರ್‌ಪಿಪಿ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ, ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು ಇತರರಿದ್ದರು. 
ಜಿಲ್ಲೆ

ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು

Kopala - Desk - Eraveni

ಗಂಗಾವತಿ: ಕೈಗಾರಿಕೆ ಕಾಯ್ದೆಯಂತೆ ಭೂ ವಿನ್ಯಾಸ ರೂಪಿಸಿ, ಅರ್ಹರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ರಾಯಚೂರು ರಸ್ತೆ ವಿದ್ಯಾನಗರದ ಬಳಿ 40 ವರ್ಷಗಳ ಹಿಂದೆ ರೂಪಿಸಿರುವ ಆಟೋನಗರ ಕೈಗಾರಿಕೆ ವಿನ್ಯಾಸ ಪ್ರದೇಶವನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು.

ಕಾನೂನುಗಿಂತ ಇಲ್ಲಿ ಯಾರು ದೊಡ್ಡವರಿಲ್ಲ, ಎಲ್ಲರೂ ಸಂವಿಧಾನಕ್ಕೆ ತಲೆ ಬಾಗಲೇಬೇಕು. ವಿನ್ಯಾಸದಲ್ಲಿ ಕೆಲ ಲೋಪದೋಷಗಳಿದ್ದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ನಿಯಮಾನುಸಾರ ಲೇಔಟ್ ನಿರ್ಮಾಣದೊಂದಿಗೆ ಲಾನುಭವಿಗಳಿಗೆ ಹಂಚಿಕೆ ಮಾಡಲು ಸೂಚಿಸುತ್ತೇನೆ.

ಕಾನೂನಿನಡಿ ಎಲ್ಲರೂ ಕೆಲಸ ಮಾಡಬೇಕಾಗಿದ್ದು, ನಿಯಮಗಳಡಿ ಸಹಾಯ ಮಾಡ್ತೀನಿ ಎಂದರು. ಕಾರ್ಮಿಕರಿಗಾದ ಅನ್ಯಾಯ ಲಾನುಭವಿಗಳು ಶಾಸಕರ ಗಮನಕ್ಕೆ ತಂದರು.

ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ, ಆಟೋ ನಗರದ ಲೇಔಟ್ ವಿಷಯದಲ್ಲಿ ನ್ಯಾಯಾಲಯ ಆದೇಶ ಉಲ್ಲಂಘನೆ ನೋಟಿಸ್ ಜಾರಿಯಾಗಿದ್ದು, ಹಿಂದಿನ ಅಧಿಕಾರಿಗಳು ಮಾಡಿದ ತಪ್ಪಿಗೆ,

ನಿಯಮಗಳನ್ನು ಮೀರಿದ ಹಿನ್ನೆಲೆ ಆಟೋ ನಗರದ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಹೊಸ ಲೇಔಟ್ ರೂಪಿಸಿ, ಅರ್ಹರಿಗೆ ವಿತರಿಸಲಾಗುವುದು ಎಂದರು.

ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಕೆಆರ್‌ಪಿಪಿ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ, ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ವಿವಿಧ ಘಟಕದ ಪದಾಧಿಕಾರಿಗಳಾದ ಯಮನೂರ ಚೌಡ್ಕಿ, ಹುಸೇನ್ ಬಾಷಾ, ಸೈಯದ್ ಅಲಿ, ಎಂ.ಡಿ.ಗೌಸ್ ಇದ್ದರು.