ಜಿಲ್ಲೆ

ಕಾನೂನು ಸೇವೆಗಳ ಕಾರ್ಯಾಗಾರ

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಿ.ಕೆ. ಕಾನೂನು ಮಹಾವಿದ್ಯಾಲಯದಲ್ಲಿ ಉಚಿತ ಕಾನೂನು ಸೇವೆಗಳ ಮಹತ್ವ ಕುರಿತು ಒಂದು ದಿನದ ಕಾರ್ಯಾಗಾರವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕಾ ಸೇವಾ ಸಮಿತಿ ಅಧ್ಯಕ್ಷ ಯಮನಪ್ಪ ಕೆ. ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ನ್ಯಾಯ ಒದಗಿಸುವುದರ ಮೂಲಕ ರಾಜ್ಯ ನೀತಿಯ ನಿರ್ದೇಶನ ತತ್ವಗಳ ಗುರಿಗಳನ್ನು ಸಾಧಿಸಬೇಕು. ತ್ವರಿತ ನ್ಯಾಯ ಒದಗಿಸುವುದು ಇಂದಿನ ಮಹತ್ವದ ಕೆಲಸವಾಗಿದೆ. ಕಾನೂನು ವಿದ್ಯಾರ್ಥಿಗಳು, ಸ್ವಯಂ ಸೇವಕರು ಈ ಉದ್ದೇಶಗಳನ್ನು ಸಾಧಿಸಲು ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಪ್ರಿಯಾ ಕಂಬಾಳಿಮಠ, ಡಾ. ಭೀಮಾಬಾಯಿ ಮುಳಗಿ, ಕವಿತಾ ಬೆಳಗಲಿ ಇವರು ವಿಷಯ ಮಂಡನೆ ಮಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ಅಧ್ಯಕ್ಷತೆ ವಹಿಸಿದ್ದರು.

ಮಧು ಲಕ್ಷ್ಮೇಶ್ವರ ಸ್ವಾಗತ ಗೀತೆ ಹಾಡಿದರು. ಯಶವಂತಗೌಡ ಪರಿಚಯಿಸಿದರು. ಚೇತನಾ ಪೋಲೇಶಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿ ನೀರಲಗಿ ವಂದಿಸಿದರು.