ಸುಳ್ಯ: ಆಲೆಟ್ಟಿ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಟನೆ ಗುರುವಾರ ಸಂಜೆ ನಡೆದಿದೆ. ಕಲ್ಲೆಂಬಿ ಸ್ಥಾನದ ಮನೆಯ ರಾವ ಬೆಳ್ಳಪ್ಪಾಡ ಎಂಬುವರ ಪುತ್ರ ಮಿಥುನ್ರಾಜ್(26) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮನೆಯವರು ಸುಳ್ಯಕ್ಕೆ ಮದುವೆಗೆಂದು ಹೋಗಿರುವ ಸಂದರ್ಭ ಕೃತ್ಯವೆಸಗಿದ್ದು ಮನೆಯವರು ಹಿಂತಿರುಗಿ ಬಂದ ಮೇಲೆ ವಿಷಯ ತಿಳಿದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.