ಜಿಲ್ಲೆ

ಕಾನೂನು ಸೇವಾ ಸಮಿತಿಯಿಂದ ದ್ವಿಮಾಸಿಕ ಸಭೆ

ಹೊಸಪೇಟೆ: ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಆವರಣದಲ್ಲಿ ಜು.22ರಂದು 2023ನೇ ಸಾಲಿನ ತಾಲೂಕು ಕಾನೂನು ಸೇವಾ ಸಮಿತಿಯ ದ್ವಿಮಾಸಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ನ್ಯಾ.ಕಿಶನ್ ಬಿ.ಮಾಡಲಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್ ಪ್ರಕರಣಗಳು, ತಾಲೂಕು ಕಾನೂನು ಸೇವಾ ಸಮಿತಿಯಿಂದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳು, ಮಧ್ಯಸ್ಥಿಕೆಗಾರರ ಪ್ರಕರಣ ಮತ್ತು ಪ್ಯಾನಲ್ ವಕೀಲರ ಕಾರ್ಯವೈಖರಿಗಳ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.