ಜಿಲ್ಲೆ

ಕಾನೂನು ಬಾಹಿರವಾಗಿ ಡಿಜೆ ಹಚ್ಚಿದ 12 ಜನರ ವಿರುದ್ಧ ದೂರು ದಾಖಲು

Haveri - Kariyappa Aralikatti

ಶಿಗ್ಗಾಂವಿ: ಪರವಾನಗಿ ಇಲ್ಲದೆ ಇಲ್ಲಿಯ ಸಂತೆ ಮೈದಾನದಲ್ಲಿ ಡಿಜೆ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ 12 ಜನರ ವಿರುದ್ಧ ಇಲ್ಲಿಯ ಶಿಗ್ಗಾಂವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಡಗಿ ಪಟ್ಟಣದ ರಬ್ಬಾನಿ ಟೋಕಲ್ಲಿ, ರಬ್ಬಾನಿ ಸೊಲ್ಲಾಪುರ, ಆಸೀಪ್​ ದೊಡ್ಡಮನಿ, ಜಾಫರಸಾಬ ಬಮ್ಮಿಗಟ್ಟಿ, ನಿಸ್ಸಾರಅಹ್ಮದ್​ ಸೇರಿ 12 ಜನರ ವಿರುದ್ಧ ದೂರು ದಾಖಲಾಗಿರುವುದು.
ಇವರು ಸಂತೆ ಮೈದಾನದಲ್ಲಿ ಸೆ. 17ರಂದು ಯಾವುದೆ ಪರವಾನಗಿ ಪಡೆಯದೆ ಡಿಜೆ ಹಚ್ಚಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.