ಕಿಕ್ಕೇರಿ ಹೋಬಳಿ ಆನೆಗೊಳ ಗ್ರಾಮದಲ್ಲಿ ಸಂವಿಧಾನ ಜಾಗೃತಿ ರಥವನ್ನು ಗಣ್ಯರು ಸಂಭ್ರಮದಿಂದ ಭಾನುವಾರ ರಾತ್ರಿ ಬರಮಾಡಿಕೊಂಡರು. ನರಸಿಂಹರಾಜು, ಸುಧಾ ದೇವರಾಜೇಗೌಡ, ಎ.ಎಸ್. ಮಂಜೇಗೌಡ, ಸುಮಿತ್ರಾ ಶಂಭುಲಿಂಗಯ್ಯ, ಬಿ.ಎಸ್. ವಿಜಯ್, ವೀರಭದ್ರಯ್ಯ ಇತರರು ಇದ್ದರು.  
ಜಿಲ್ಲೆ

ನೆಮ್ಮದಿಯ ಜೀವನಕ್ಕೆ ಕಾನೂನು ಅಗತ್ಯ

ಮಾದೇಶ್ ತಿ.ನರಸೀಪುರ

ಕಿಕ್ಕೇರಿ: ಭವ್ಯ ಭಾರತವನ್ನು ಸಂವಿಧಾನದಡಿ ಸುಂದರವಾಗಿ ನಿರ್ಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಜ್ಞಾನಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ವಿಜಯ್ ಹೇಳಿದರು.


ಐಕನಹಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಆಗಮಿಸಿದ ಸಂವಿಧಾನ ಜಾಗೃತಿ ರಥವನ್ನು ಗಣ್ಯರೊಂದಿಗೆ ಸ್ವಾಗತಿಸಿ ಮಾತನಾಡಿ, ಹುಟ್ಟಿನಿಂದ ಸಾಯವವರಿಗೆ ಒಂದಲ್ಲ ಒಂದು ಕಾನೂನಿನಡಿ ಬದುಕುಬೇಕಿದೆ. ನೆಮ್ಮದಿ ಬದುಕಿಗೆ ಕಾನೂನು ಅವಶ್ಯವಿದೆ. ಕಾನೂನು ತಿಳಿವಳಿಕೆ ಅವಶ್ಯವಿದೆ. ಸಂವಿಧಾನವನ್ನು ಓದಿ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.


ಐಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸುಧಾ ದೇವರಾಜೇಗೌಡ, ಸದಸ್ಯರಾದ ಎ.ಎಸ್. ಮಂಜೇಗೌಡ, ಸುಮಿತ್ರಾ ಶಂಭುಲಿಂಗಯ್ಯ, ತಾಪಂ ಅಧಿಕಾರಿ ನರಸಿಂಹರಾಜು, ಬಿಆರ್‌ಪಿ ವೀರಭದ್ರಯ್ಯ, ಮುಖ್ಯಶಿಕ್ಷಕ ಕೃಷ್ಣಶೆಟ್ಟಿ, ಶಾಂತಪ್ಪಾಜಿ, ಶ್ರೀಧರ್ ಇತರರು ಇದ್ದರು.