ದೇವದುರ್ಗ ತಾಲೂಕು ಜಾಲಹಳ್ಳಿ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಮಾತನಾಡಿದರು. ಸಿಪಿಐ ವೈ.ಎನ್. ಗುಂಡೂರಾವ್, ಪಿಎಸ್‌ಐ ವೈಶಾಲಿ ಝಳಕಿ, ಮುಖಂಡರಾದ ಸಾಬಣ್ಣ ಕಮ್ಮಲದಿನ್ನಿ, ಬಾಬು ಮೆಡಿಕಲ್, ಶಬ್ಬೀರ್, ಬೂತಪ್ಪ ದೇವರಮನಿ, ವೀರೇಶ ಅರಕೇರಾ, ಮಕ್ತಮ್ ಬಾಷಾ, ಚನ್ನಪ್ಪ ಆಂದೇಲಿ ಇದ್ದರು. 
ಜಿಲ್ಲೆ

ಕಾನೂನು ಮೀರಿದರೆ ಕಠಿಣ ಕ್ರಮ

ರುದ್ರಪ್ಪ ವಾಲಿ

ದೇವದುರ್ಗ: ಹಬ್ಬಗಳು ಶಾಂತಿ, ಪ್ರೀತಿ, ವಿಶ್ವಾಸದ ಸಂಕೇತ. ಯುವಕರು ವಿಘ್ನನಿವಾರಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ದೇವರ ಆಶೀರ್ವಾದ ಪಡೆಯಬೇಕು. ಗಲಾಟೆ, ಜಗಳ ಮಾಡಿ ಜೀವನಕ್ಕೆ ವಿಘ್ನ ತಂದುಕೊಳ್ಳಬಾರದು ಎಂದು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಹೇಳಿದರು.

ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಶನಿವಾರ ಮಾತನಾಡಿದರು. ದೇಶದಲ್ಲಿ ಆಚರಣೆ ಮಾಡುವ ಪ್ರತಿ ಹಬ್ಬ ಇತಿಹಾಸ ಹಾಗೂ ಭಕ್ತಿಯ ಸಂಕೇತವಾಗಿದೆ.

ಗಣೇಶ ಹಬ್ಬವನ್ನು ಯುವಕರು ಶಾಂತಿಯುತವಾಗಿ ಆಚರಣೆ ಮಾಡಬೇಕು. ಮೆರವಣಿಗೆ ವೇಳೆ ಡಿಜೆ ಬಳಸಬಾರದು. ಪೊಲೀಸ್ ಇಲಾಖೆಯ ಎಲ್ಲ ನಿಯಮಗಳನ್ನು ಪಾಲಿಸಬೇಕು. ಕಾನೂನನ್ನು ಮೀರಿದ್ದಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಗೋವಿಂದಪ್ಪ ಆಲಗೇರಿ, ವೆಂಕೋಬ ಪೂಜಾರಿ, ವೆಂಕೋಬ ತೋಟದ್, ಮೌನೇಶ ಚಪ್ಪಳಿಕಿ, ಹೈದರ್ ಸಾಬ್ ಮುಲ್ಲಾ, ದುರುಗಪ್ಪ ನಾಯಕ ಅಗಸಿಮನಿ, ಮೌನೇಶ ದೇಸಾಯಿ, ರಿಯಾಜ್ ಆರ್ತಿ ಇತರರಿದ್ದರು.