ಬಾರ್ಕೂರು ಹನೆಹಳ್ಳಿ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಗುರುವಾರ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಭಾರತೀಯ ಜೀವ ವಿಮಾ ನಿಗಮನದ ನಿವೃತ್ತ ಅಧಿಕಾರಿ ಎನ್.ವಿ ಕಾಮತ್ ಮಾತನಾಡಿದರು.  
ಜಿಲ್ಲೆ

ಪ್ರತಿಯೊಬ್ಬರಲ್ಲೂ ದೇಶ ಭಕ್ತಿ

ಬ್ರಹ್ಮಾವರ: ದೇಶ ಭಕ್ತಿ ಸೈನಿಕರಿಗೆ ಮಾತ್ರ ಅಲ್ಲ ಎಲ್ಲರಲ್ಲೂ ಇರಬೇಕು ಎಂದು ಭಾರತೀಯ ಜೀವ ವಿಮಾ ನಿಗಮನದ ನಿವೃತ್ತ ಅಧಿಕಾರಿ ಎನ್.ವಿ.ಕಾಮತ್ ಹೇಳಿದರು.

ಬಾರ್ಕೂರು ಹನೆಹಳ್ಳಿ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಗುರುವಾರ ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬ್ರಹ್ಮಾವರದ ರೋಯಲ್ ರೋಟರಿ, ಬ್ರಹ್ಮಾವರದ ನರೇನ್ ಅಕಾಡೆಮಿ, ಜಯಂಟ್ಸ್ ಗ್ರೂಪ್ ಆಶ್ರಯದಲ್ಲಿ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್‌ಲಮಾಣಿ, ತಾಲೂಕು ಅಧಿಕಾರಿ ಶುಭಾ ಜನಾರ್ದನ್, ಸೇನಾ ಶಾಲೆ ಮುಖ್ಯಸ್ಥ ಸುಬೇದಾರ್ ಜನಾರ್ದನ, ನರೇನ್ ಅಕಾಡೆಮಿ ಚಂದ್ರಕಾಂತ್, ಜಯಂಟ್ಸ್‌ನ ಮಿಲ್ಟನ್ ಒಲಿವೆರಾ, ಪ್ರತಿಭಾ, ವಿವೇಕಾನಂದ ಕಾಮತ್, ರೋಯಲ್ ರೋಟರಿಯ ಗಣೇಶ, ತ್ರಿವಿಕ್ರಮ ಅಡಿಗ ಉಪಸ್ಥಿತರಿದ್ದರು. ಸೇನಾ ತರಬೇತಿ ವಿದ್ಯಾರ್ಥಿ ಪವನ್ ಕಾರ್ಯಕ್ರಮ ನಿರೂಪಿಸಿದರು.