ಉಡುಪಿಯ ಹರ್ಷ ಮಳಿಗೆಯಲ್ಲಿ ಎಒ ಸ್ಮಿತ್​ ಕಂಪನಿಯ ವಾಟರ್​ ಪ್ಯುರಿಫೈಯರ್ ಬಿಡುಗಡೆಗೊಳಿಸಲಾಯಿತು. ಸಿದ್ಧಾರ್ಥ್​ ಪ್ರಭು, ಆಶಿಶ್​ ಕೌಲ್​, ಕೌಶಿಕ್​ ಚಟರ್ಜಿ, ಸುನೀಲ್​ ಪಟೇಲ್​ ಇತರರಿದ್ದರು.  
ಜಿಲ್ಲೆ

ಆರೋಗ್ಯ ವೃದ್ಧಿಸುವ ನೂತನ, ವಿಶಿಷ್ಟ ಉತ್ಪನ್ನ

ಸಿದ್ಧಾರ್ಥ್​ ಪ್ರಭು ಅಭಿಪ್ರಾಯ | ಹರ್ಷ ಮಳಿಗೆಯಲ್ಲಿ ವಾಟರ್​ ಪ್ಯುರಿಫೈಯರ್ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ
ನಾವೆಲ್ಲ ಆರೋಗ್ಯಪೂರ್ಣವಾಗಿರಲು ಶುದ್ಧ ಕುಡಿಯುವ ನೀರಿನ ಅಗತ್ಯತೆ ಇದೆ. ಇತ್ತೀಚೆಗೆ ಪರಿಸರ ಮಾಲಿನ್ಯದಿಂದಾಗಿ ಕಲುಷಿತಗೊಂಡ ನೀರು ಸೇವಿಸಿ ಅನೇಕ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಇದೀಗ ಮನೆಯಲ್ಲಿಯೇ ನೀರು ಶುದ್ಧೀಕರಿಸಿ ಏಕಕಾಲದಲ್ಲಿ ಬಿಸಿ ಹಾಗೂ ಬಿಸಿಯಿಲ್ಲದ ಶುದ್ಧ ನೀರು ಸೇವಿಸಲು ಎಒ ಕಂಪನಿಯ ಚಿಕ್ಕದಾದ ವಾಟರ್​ ಪ್ಯುರಿಫೈಯರ್​ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಂದು ಹರ್ಷ ಮಳಿಗೆಯ ಮರ್ಚಂಡೈಸ್​ ಹೆಡ್​ ಸಿದ್ಧಾರ್ಥ್​ ಪ್ರಭು ತಿಳಿಸಿದರು.

ಉಡುಪಿಯ ಸಿಟಿ ಬಸ್​ ನಿಲ್ದಾಣ ಸಮೀಪದ ಹರ್ಷ ಮಳಿಗೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಒ ಸ್ಮಿತ್​ ಕಂಪನಿಯ ಪ್ರೊಪ್ಲೆನೆಟ್​ ಪಿ8 ಎಂಬ ವಿಶೇಷ ವಾಟರ್​ ಪ್ಯುರಿಫೈಯರ್ ಬಿಡುಗಡೆಗೊಳಿಸಿ ಮಾತನಾಡಿದರು.

12 ವರ್ಷದ ಒಡನಾಟ

150 ವರ್ಷ ಹಳೆಯದಾದ ಎಒ ಸ್ಮಿತ್​ ಕಂಪನಿಯು ಭಾರತದಲ್ಲಿ 2008ರಿಂದ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕಳೆದ 12 ವರ್ಷದಿಂದ ಹರ್ಷದೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದೆ. ಪ್ರೊಪ್ಲೆನೆಟ್​ ಪಿ8 ಎಂಬ ವಿಶೇಷ ವಾಟರ್​ ಪ್ಯುರಿಫೈಯರ್ ಶುದ್ಧ ಕುಡಿಯುವ ನೀರು ಒದಗಿಸಲಿದೆ. ಬಿಸಿಯೇ ಹೊಸ ಆರೋಗ್ಯ ಎಂಬ ಘೋಷಣೆಯೊಂದಿಗೆ ಜನರ ಆರೋಗ್ಯ ವೃದ್ಧಿಸುವ ವಿಶಿಷ್ಟ ಉತ್ಪನ್ನ ಇದಾಗಿದೆ ಎಂದರು.

ವಿಶ್ವಾಸಾರ್ಹ ಮಳಿಗೆ ಹರ್ಷ

ಎಒ ಸ್ಮಿತ್​ ಕಂಪನಿಯ ಸೇಲ್ಸ್​ ಆ್ಯಂಡ್​ ಸರ್ವೀಸ್​ ಡೈರೆಕ್ಟರ್​ ಆಶಿಶ್​ ಕೌಲ್​ ಮಾತನಾಡಿ, 2008ರಿಂದ ನಮ್ಮ ಕಂಪನಿಯು ಭಾರತದಲ್ಲಿ ವಾಟರ್​ ಹೀಟರ್​ ಹಾಗೂ ವಾಟರ್​ ಪ್ಯುರಿಫೈಯರ್​ ಉತ್ಪನ್ನ ಮಾರಾಟ ಮಾಡುತ್ತಿದೆ. ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಪೂರೈಸುವಲ್ಲಿ ಹರ್ಷ ಸದಾ ಮುಂಚೂಣಿಯಲ್ಲಿದೆ. ಜನರ ವಿಶ್ವಾಸ ಗಳಿಸಿರುವ ಇಂತಹ ಮಳಿಗೆಯಲ್ಲಿ ನಮ್ಮ ಉತ್ಪನ್ನ ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದರು.

ಪ್ರ್ರಾತ್ಯಕ್ಷಿಕೆ

ಪ್ರ್ರಾತ್ಯಕ್ಷಿಕೆ ಮೂಲಕ ಎಒ ಸ್ಮಿತ್​ ಕಂಪನಿಯ 150 ವರ್ಷದ ಇತಿಹಾಸ ತಿಳಿಸಿದ ಆಶಿಶ್​ ಕೌಲ್​, 1874ರಲ್ಲಿ ಅಮೆರಿಕದಲ್ಲಿ ಆರಂಭಗೊಂಡು ಇಲ್ಲಿಯವರೆಗೂ ಗುಣಮಟ್ಟದ ಉತ್ಪನ್ನ ತಯಾರಿಸುವ ಮೂಲಕ ವಿಶ್ವದ ಮಾರುಕಟ್ಟೆಯಲ್ಲಿ ಖ್ಯಾತಿ ಗಳಿಸಿದೆ. ಚೀನಾದಂತಹ ತಾಂತ್ರಿಕತೆಯ ದೇಶದಲ್ಲಿ ಈ ಕಂಪನಿ 2ನೇ ಸ್ಥಾನದಲ್ಲಿದ್ದು, ವಿಶ್ವದ 27 ದೇಶಗಳಲ್ಲಿ ಬ್ರ್ಯಾಂಚ್​ ಹೊಂದಿದೆ. ಭಾರತದಲ್ಲಿಯೂ ಸಹ ಒಂದು ಬ್ರ್ಯಾಂಚ್ ಇದೆ ಎಂದು ತಿಳಿಸಿ, ಪ್ರೊಪ್ಲೆನೆಟ್​ ಪಿ8 ವಾಟರ್​ ಪ್ಯುರಿಫೈಯರ್​ನ ವಿಶೇಷತೆ ವಿವರಿಸಿದರು.

ಎಒ ಸ್ಮಿತ್​ ಕಂಪನಿಯ ನ್ಯಾಷನಲ್​ ಸೇಲ್ಸ್​ ಹೆಡ್​ ಕೌಶಿಕ್​ ಚಟರ್ಜಿ, ಸ್ಟೇಟ್​ ಹೆಡ್​ ಸುನೀಲ್​ ಪಟೇಲ್​ ಉಪಸ್ಥತರಿದ್ದರು. ಹರ್ಷ ಉಡುಪಿ ಮಳಿಗೆಯ ಸ್ಟೋರ್​ ಮೆನೇಜರ್​ ಸ್ಟೀವನ್​ ಲೋಬೋ ಅತಿಥಿಗಳನ್ನು ಸ್ವಾಗತಿಸಿದರು. ರೆನಿಷಾ ಡಯಾಸ್​ ಕಾರ್ಯಕ್ರಮ ನಿರೂಪಿಸಿದರು.

ಯಂತ್ರದ ವಿಶೇಷತೆ ಏನು?

  • 8 ಹಂತದಲ್ಲಿ ಫಿಲ್ಟರ್​ ಅಳವಡಿಸಿದ್ದು, ನೀರಿನ ಶುದ್ಧೀಕರಣ.
  • 6 ತಿಂಗಳ ಮಗುವಿಗೂ ಸಹ ಇದರ ನೀರು ಕುಡಿಸಬಹುದು.
  • ಪರಿಸರಕ್ಕೂ ಪೂರಕ, 3 ತಾಪಮಾನ ಮಾದರಿಯಲ್ಲಿ ತ್ವರಿತ ಶುದ್ಧೀಕರಣ.
  • ಶುದ್ಧೀಕರಿಸಿದ ಬಿಸಿಯಲ್ಲದ ಹಾಗೂ 45 ಡಿಗ್ರಿಯಿಂದ 80 ಡಿಗ್ರಿ ಬಿಸಿನೀರು ಏಕಕಾಲದಲ್ಲಿ ಲಭ್ಯ.
  • ಶೇ. 100ರಷ್ಟು ಆರ್​ಒ + ಎಸ್​ಸಿಎಂಟಿ ತಾಂತ್ರಿಕತೆಯೊಂದಿಗೆ ದ್ವಿಗುಣ ಭದ್ರತೆ.
  • ಪ್ರತಿ ಗಂಟೆಗೆ 15 ಲೀಟರ್​ ನೀರು ಶುದ್ಧೀಕರಿಸುವ ಸಾಮರ್ಥ್ಯ.
  • ಸಿಲ್ವರ್​ ನ್ಯಾನೋ ತಂತ್ರಜ್ಞಾನದ ಬ್ಯಾಕ್ಟೀರಿಯಾ ವಿರೋಧಿ ಟ್ಯಾಂಕ್​ ಅಳವಡಿಕೆ.
  • ಶೇ.60ರಷ್ಟು ನೀರು ಶುದ್ಧೀಕರಿಸಿ, ಉಳಿದ ನೀರು ಮರುಬಳಕೆಗೆ ಲಭ್ಯ.
  • ಸಿಎಫ್​ಎಂ ಹಾಗೂ ಕ್ಷಾರಿಯ ತಂತ್ರಜ್ಞಾನದಿಂದ ನೀರಿನ ರುಚಿ ಉಳಿಸಿಕೊಳ್ಳುತ್ತದೆ.
  • ಎಲ್ಲ 8 ಫಿಲ್ಟರ್​ ಸಹಿತ ಒಂದು ವರ್ಷ ವಾರಂಟಿ.