ಹನೂರಿನಲ್ಲಿ ಶ್ರೀ ಬೆಟ್ಟಳ್ಳಿ ಮಾರಮ್ಮ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು. ನಾರಾಯಣ್, ಶಂಕರ್, ಶಿವರಾಜು, ಸಲೀಂಪಾಷ ಇತರರು ಇದ್ದರು.  
ಜಿಲ್ಲೆ

ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ

ಹನೂರು : ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಮಂಗಳವಾರ ಹೊರತು ಪಡಿಸಿ ಉಳಿದೆಲ್ಲ ದಿನಗಳಲ್ಲಿ ಅನ್ನ ಸಂತರ್ಪಣೆ ನಡೆಸುವ ಕಾರ್ಯಕ್ಕೆ ಬುಧವಾರ ಬಂಡಳ್ಳಿ ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಸಂಘದ ಅಧ್ಯಕ್ಷ ನಾರಾಯಣ್ ಮಾತನಾಡಿ, ಹನೂರು ಭಾಗದಲ್ಲಿ ಬಡ ಜನರೇ ಹೆಚ್ಚಾಗಿದ್ದಾರೆ. ಕೆಲಸ ಕಾರ್ಯಗಳ ನಿಮಿತ್ತ ವಿವಿಧ ಗ್ರಾಮದ ಜನರು ಹನೂರಿಗೆ ಆಗಮಿಸುತ್ತಾರೆ. ಕೆಲವರು ಹಸಿವಿನಿಂದ ಹಿಂತಿರುಗುತ್ತಾರೆ. ಹಾಗಾಗಿ ಗ್ರಾಮದೇವತೆ ಬೆಟ್ಟಳ್ಳಿ ಮಾರಮ್ಮ ಆಶೀರ್ವಾದದೊಂದಿಗೆ ಸಂಘದ ಎಲ್ಲ ಸದಸ್ಯರು ಒಟ್ಟುಗೂಡಿ ಮಂಗಳವಾರ ಹೊರತು ಪಡಿಸಿ ಉಳಿದೆಲ್ಲ ದಿನಗಳಲ್ಲಿ ಅನ್ನ ಸಂತರ್ಪಣೆ ನಡೆಸಲಾಗುವುದು. ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹಾಗೆಯೇ ಆಸಕ್ತ ದಾನಿಗಳು ಆಹಾರ ಪದಾರ್ಥ, ತರಕಾರಿ, ಹಣ ಹಾಗೂ ಇನ್ನಿತರ ರೂಪದಲ್ಲಿ ಅನ್ನ ಸಂತರ್ಪಣೆಗೆ ಸಹಾಯ ಮಾಡಬಹುದು ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಶಂಕರ್, ಶಿವರಾಜು, ನಂಜುಂಡಸ್ವಾಮಿ, ಮಲ್ಲೇಶ್, ಮಹೇಶ್, ಸಲೀಂ ಪಾಷ, ಕುಮಾರ್ ಹಾಗೂ ಇನ್ನಿತರರು ಇದ್ದರು.