ಕಲಬುರಗಿ: ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆ ಸ್ಪರ್ಶಿಸಿದರೆ ಅಂತಃಕರಣ ಹಾಗೂ ಬಂಧುತ್ವ ಅರಳಿ ನಿಲ್ಲಬೇಕಾಗಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ. ಸೋಮಶೇಖರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕ್ರಿಯಾಶೀಲ ಗೆಳೆಯರ ಬಳಗದ ಸಹಯೋಗದಡಿ ನಗರದ ಸುವರ್ಣ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಹಿತ್ಯ ಸಂಸ್ಕೃತಿ ಉತ್ಸವ-೨೦೨೪ಕ್ಕೆ ಚಾಲನೆ ನೀಡಿದ ಅವರು, ಜಗಕ್ಕೆ ಜ್ಯೋತಿಯಾಗಿ ಬೆಳಗುವ ಸಾಹಿತ್ಯ ಅಗತ್ಯವಿದೆ. ಅಂಥ ಸಾಹಿತ್ಯದಿಮದ ಸಮಾಜ ಎಷ್ಟರ ಮಟ್ಟಿಗೆ ಪರಿವರ್ತನೆ ಆಗಿದೆ ಎಂಬುದನ್ನು ಕೂಡ ವಿಮರ್ಶಿಸಬೇಕು. ಭಾಷೆ, ಸಂಸ್ಕೃತಿ ಉಳಿದರೆ ಮಾತ್ರ ನಾವೆಲ್ಲ ಉಳಿಯುತ್ತೇವೆ. ಇಂಥ ಕೆಲಸ ಸರ್ಕಾರದ ಬದಲು ಕನ್ನಡ ಸಂಘಟಕರಿಂದ ಸಾಧ್ಯವಾಗಲಿದೆ ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ. ಸಾಗರ ಮಾತನಾಡಿ, ಸಾಹಿತ್ಯ ಒಗ್ಗೂಡಿಸುವ, ಮಾನವೀಯತೆ ಹೆಚ್ಚಿಸುವ ಹಾಗೂ ಸಮಾಜದಲ್ಲಿ ಸೌಹಾರ್ದ ಮೂಡಿಸುವಂಥ ಸಾಹಿತ್ಯ ರಚನೆ ಆಗಬೇಕು. ಗ್ರಾಮೀಣ ಜನರೇ ಕನ್ನಡದ ನಿಜವಾದ ವಾರಸುದಾರರು. ಅವರ ಬದುಕಿನ ಬವಣೆಗಳನ್ನು ಸಾಹಿತ್ಯದ ಮೂಲಕ ಪರಿಹರಿಸುವ ಕೆಲಸ ಸಾಹಿತಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಸಾರಂಗಮಠದ ಜುಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ, ಅಣದೂರಿನ ವರಜ್ಯೋತಿ ಬಂತೇಜಿ ನೇತೃತ್ವ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಸಾಹಿತ್ಯ ಪ್ರೇರಕಿ ಲಕ್ಷ್ಮೀ ದತ್ತಾತ್ರೇಯ ಪಾಟೀಲ್ ರೇವೂರ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಶರಣಬಸಪ್ಪ ಪಾಟೀಲ್ ಅಷ್ಟಗಿ ಮಾತನಾಡಿದರು.
ಕ್ರಿಯಾಶೀಲ ಗೆಳೆಯರ ಬಳಗದ ಕಲ್ಯಾಣಕುಮಾರ ಶೀಲವಂತ, ಧರ್ಮಣ್ಣ ಧನ್ನಿ, ಶಕುಂತಲಾ ಪಾಟೀಲ್ ಜಾವಳಿ, ಧರ್ಮರಾಜ ಜವಳಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಡಾ.ರೆಹಮಾನ್ ಪಟೇಲ್, ಸಿದ್ಧಲಿಂಗ ಬಾಳಿ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ಮುಡುಬಿ ಗುಂಡೇರಾವ, ಜಗದೀಶ ಮರಫ್ಳಿ, ವಿದ್ಯಾಸಾಗರ ದೇಶಮುಖ, ಜಗನ್ನಾಥ ತರನಳ್ಳಿ, ರಾಜೇಂದ್ರ ಮಾಡಬೂಳ, ಡಾ.ಸದಾನಂದ ಪೆರ್ಲ, ಎಸ್.ಎಲ್. ಪಾಟೀಲ್, ವಿನೋದ ಜನೇವರಿ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ್, ರೇಣುಕಾ ಎನ್., ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ನಾಗಪ್ಪ ಸಜ್ಜನ್, ಗುರುಬಸಪ್ಪ ಸಜ್ಜನಶೆಟ್ಟಿ, ಎಸ್.ಕೆ. ಬಿರಾದಾರ, ಶಾಮಸುಂದರ ಕುಲಕರ್ಣಿ, ಡಾ.ಬಾಬುರಾವ ಶೇರಿಕಾರ, ಸೈಯದ್ ನಜಿರುದ್ದೀನ್, ನವಾಬಖಾನ್, ರಮೇಶ ಬಡಿಗೇರ, ವಿನಾಯಕ ಜೋಶಿ, ಎಂ.ಎನ್. ಸುಗಂಧಿ, ಮಹೇಶ ಚಿಂತನಪಳ್ಳಿ ಇದ್ದರು.
ಕಸಾಪ ಜಿಲ್ಲಾಧ್ಯಕ್ಷರ ಪರಿಚಯಾತ್ಮಕ ಕೃತಿ ಕನ್ನಡ ಸಾರಥಿಯನ್ನು ಸಹಕಾರಿ ಧುರೀಣ ನಾಗರೆಡ್ಡಿ ಪಾಟೀಲ್ ಕರದಾಳ ಜನಾರ್ಪಣೆಗೊಳಿಸಿದರು.