ಜಿಲ್ಲೆ

KMF ಹಾಲು ಒಕ್ಕೂಟದ ನಂದಿನ ಬ್ರಾಂಡ್‌ನ ಹೊಸ ಉತ್ಪನ್ನಗಳ ಲೋಕಾರ್ಪಣೆ

ಬೆಂಗಳೂರು: ನಂದಿನಿ ಉತ್ಪನ್ನಗಳ ನೂತನ ಬ್ರಾಂಡ್‌ ರಾಯಭಾರಿ ಶಿವರಾಜ್‌ ಕುಮಾರ್‌ ಅವರು ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿ,  ಜಾಹಿರಾತು ಬಿಡುಗಡೆಗೊಳಿಸಿದರು. ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್​​ ಮಾಡಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇಂದು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ನೂತನ ಬ್ರಾಂಡ್‌ ರಾಯಭಾರಿ ಶಿವರಾಜ್‌ ಕುಮಾರ್‌ ಅವರು ಜಾಹಿರಾತು ಬಿಡುಗಡೆಗೊಳಿಸಿದರು.
ಈ ಸಮಾರಂಭದಲ್ಲಿ ಶ್ರೀಮತಿ ಗೀತಾ ಶಿವರಾಜ್‌ ಕುಮಾರ್‌, ಸಚಿವ ಮಧು ಬಂಗಾರಪ್ಪ, ಕೆ.ಎಂ.ಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಮೊದಲಾದವರು ಉಪಸ್ಥಿತರಿದ್ದರು. 

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೆ ಎಂ ಎಫ್‌) ಉತ್ಪನ್ನಗಳಿಗೆ ಯಾವುದೇ ಸಂಭಾವನೆ ಪಡೆಯದೇ 'ನಟಸಾರ್ವಭೌಮ' ಡಾ ರಾಜ್‌ಕುಮಾರ್ ಅವರು ರಾಯಭಾರಿಯಾಗಿದ್ದರು. ಅವರ ಬಳಿಕ ನಟ ಪುನೀತ್ ರಾಜ್‌ಕುಮಾರ್ ಕೂಡ ಅಣ್ಣಾವ್ರ ಹಾದಿಯಲ್ಲೇ ಹೆಜ್ಜೆ ಇಟ್ಟಿದ್ದರು. ಇದೀಗ 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅವರು ಕೆಎಂಎಫ್‌ ಉತ್ಪನ್ನಗಳಿಗೆ ರಾಯಭಾರಿಯಾಗಿ ನೇಮಕವಾಗಿದ್ದಾರೆ.