ಜಿಲ್ಲೆ

‘ಕರಾಮುವಿ ಸುದ್ದಿ ಪತ್ರಿಕೆ’ ಬಿಡುಗಡೆ

reportermys

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗ ಹೊರ ತಂದಿರುವ ‘ಕರಾಮುವಿ ಸುದ್ದಿ ಪತ್ರಿಕೆ’ಯನ್ನು ಬಿಡುಗಡೆ ಮಾಡಲಾಯಿತು.


ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುದ್ದಿ ಪತ್ರಿಕೆಯನ್ನು ಪತ್ರಕರ್ತ ಕೆ.ನರಸಿಂಹಮೂರ್ತಿ ಬಿಡುಗಡೆ ಮಾಡಿದರು. ಪ್ರಭಾರ ಕುಲಪತಿ ಡಾ.ಎ.ಖಾದರ್ ಪಾಷಾ, ಡೀನ್ ಡಾ.ಕಾಂಬ್ಳೆ ಅಶೋಕ್, ಸಂಯೋಜನಾಧಿಕಾರಿ ಡಾ.ಆರ್.ಸಂತೋಷ್‌ನಾಯಕ್ ಇತರರಿದ್ದರು.