ಜಿಲ್ಲೆ

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆ

Davangere - Desk - Ganesh M K

ದಾವಣಗೆರೆ: ಸರ್ವಜನಾಂಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಮಾಸಿಕ 2 ಸಾವಿರ ರೂ. ನೀಡುತ್ತಿದೆ ಎಂದು ನವಿಲೆಹಾಳ್ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ತಿಳಿಸಿದರು.

ಚನ್ನಗಿರಿ ತಾಲೂಕಿನ ನವಿಲೆಹಾಳ್ ಗ್ರಾಪಂನಲ್ಲಿ ಬುಧವಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಖಾತೆಗೆ ನೇರವಾಗಿ ಹಣ ಹಾಕುವುದರಿಂದ ಕಡ್ಡಾಯವಾಗಿ ಫಲಾನುಭವಿಗಳ ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ ಆಗಿರಬೇಕು, ಸೂಕ್ತ ಮೊಬೈಲ್ ನಂಬರ್ ನಮೂದಿಸಿರಬೇಕು. ಹೆಸರು ತಪ್ಪಿಲ್ಲದಂತಿರಬೇಕು. ಇಲ್ಲದಿದ್ದರೆ ಹಣ ಸಂದಾಯವಾಗುವುದು ತಡವಾಗುತ್ತದೆ ಎಂದು ಅವರು ವಿವರಿಸಿದರು.

ಅಂಗನವಾಡಿ ಕಾರ್ಯಕರ್ತೆ ರುದ್ರಮ್ಮ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಮುಮ್ತಾಜ್ ಷರೀಫ್ ಸಾಬ್, ಸದಸ್ಯರಾದ ಶಬ್ನಂ ಬಿ.ಎಚ್., ವಿಜಯಲಕ್ಷ್ಮೀ ಕೆ.ಎಂ., ರೇಣುಕಮ್ಮ, ಕವಿತಾ, ಹೊನ್ನಮ್ಮ, ರತ್ನಮ್ಮ, ಪಲ್ಲವಿ, ದೇವರಾಜ್ ಎಸ್.ಎನ್., ಅನ್ವರ್, ಹಜರತ್ ಅಲಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನೂರುಲ್ಲಾ, ಕರವಸೂಲಿಗಾರ ಮಂಜಪ್ಪ, ಗ್ರಂಥಾಲಯ ಮೇಲ್ವಿಚಾರಕ ದಾದಾಪೀರ್, ಎನ್. ಚಂದ್ರಪ್ಪ, ನೀರಗಂಟಿಗಳಾದ ತಿಪ್ಪಣ್ಣ, ಆಂಜನಪ್ಪ, ಆನಂದ, ಎ.ಕೆ. ಮಂಜಪ್ಪ ಮತ್ತಿತರರಿದ್ದರು.