ಜಿಲ್ಲೆ

ದಸರಾ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಚಾಲನೆ

ಮೈಸೂರು: ಎರಡನೇ ವರ್ಷದ ಮೈಸೂರು ದಸರಾ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಗುರುವಾರ ಚಾಲನೆ ನೀಡಲಾಯಿತು.


ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉರಗ ತಜ್ಞ ಸ್ನೇಕ್ ಶ್ಯಾಮ್ ಸ್ಪರ್ಧೆಗೆ ಸಿದ್ಧಪಡಿಸಿದ ವೆಬ್‌ಸೈಟ್ ಬಿಡುಗಡೆಗೊಳಿಸಿ ಮಾತನಾಡಿ, ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಮಾನ್ಯತೆಯೊಂದಿಗೆ ಸ್ಪರ್ಧೆ ನಡೆಸಲಾಗುತ್ತಿದೆ. ಸಂಪೂರ್ಣವಾಗಿ ರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಿದರು.

ವನ್ಯಜೀವಿ ಛಾಯಾಗ್ರಹಕ ಹಾಗೂ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾದ ಎಸ್.ತಿಪ್ಪೇಸ್ವಾಮಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ತೀರ್ಪುಗಾರರಾಗಿ ಟಿ.ಕೆಂಪಣ್ಣ, ಜಿ.ಎಸ್.ಕೃಷ್ಣಮೂರ್ತಿ ಹಾಗೂ ಎಂ.ರಾಮು ಭಾಗವಹಿಸಲಿದ್ದಾರೆ. ಛಾಯಾಚಿತ್ರಗಳಿಗೆ ತಾಂತ್ರಿಕ ಮಾನದಂಡಗಳಿದ್ದು, ಸ್ಪರ್ಧೆಗೆ ಪ್ರವೇಶ ಶುಲ್ಕವಿದೆ. ಹೆಚ್ಚಿನ ಮಾಹಿತಿಗೆ ಮೊ.99017 21712ಅನ್ನು ಸಂಪರ್ಕಿಸಬಹುದು ಎಂದರು. ಸ್ಪರ್ಧೆಯ ಅಧ್ಯಕ್ಷ ಬಿ.ಶಿವಕುಮಾರ್ ಇದ್ದರು.