ಜಿಲ್ಲೆ

ಜೋಕಾಲಿ ಜೀಕಿದ ಮಕ್ಕಳು, ಮಹಿಳೆಯರು

Gadag - Desk - Tippanna Avadoot

ಮುಂಡರಗಿ: ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ನಿಮಿತ್ತ ಜನರು ಭಾನುವಾರ ನಾಗರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹಾಲೆರೆದು ಸಂಭ್ರಮದಿಂದ ಹಬ್ಬ ಆಚರಿಸಿದರು.


ಸ್ಥಳೀಯ ಕೋಟೆ ಭಾಗದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಅಂಬಾಭವಾನಿ ದೇವಸ್ಥಾನ ಮೊದಲಾದ ಕಡೆಗಳಲ್ಲಿನ ನಾಗರಮೂರ್ತಿಗೆ ಭಕ್ತರು ಸಂಪ್ರದಾಯದಂತೆ ಶ್ರದ್ಧಾ ಭಕ್ತಿಯಿಂದ ಹಾಲೆರೆದು ಪೂಜೆ ಸಲ್ಲಿಸಿದರು.


ಕೆಲವರು ತಮ್ಮ ಮನೆಗಳಲ್ಲಿ ಮಣ್ಣಿನಿಂದ ತಯಾರಿಸಿದ ನಾಗರಮೂರ್ತಿಗೆ ಹಾಲೆರೆದು ಭಕ್ತಿಯಿಂದ ಪೂಜಿಸಿದರು. ಹಬ್ಬ ಹಿನ್ನೆಲೆ ಮನೆ ಮಂದಿಗಳೆಲ್ಲ ಒಂದೆಡೆ ಸೇರಿ ವಿಶೇಷ ಭೋಜನ ಸವಿದರು. ಹಲವು ಕಡೆಗಳಲ್ಲಿ ಮಕ್ಕಳು, ಮಹಿಳೆಯರು ಜೋಕಾಲಿ ಜೀಕಿ ಸಂಭ್ರಮಿಸಿದರು.