ಜಿಲ್ಲೆ

ಮದ್ದೂರಿನಲ್ಲಿ ಲಾಠಿ ಚಾರ್ಜ್ ಖಂಡನೀಯ

ಮಂಜುನಾಥ ಅಂಗಡಿ

ಧಾರವಾಡ: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಹಿಂದು ಕಾರ್ಯಕರ್ತರ ಮೇಲೆ ಮಾಡಿರುವ ಅಮಾನುಷ ಪೊಲೀಸ್ ಲಾಠಿ ಚಾರ್ಜ್ ಖಂಡನೀಯ ಎಂದು ಜಿಲ್ಲಾ ಬಿಜೆಪಿ ಸಹವಕ್ತಾರ ಮೋಹನ ರಾಮದರ್ಗ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲೆಸೆದಿರುವುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಬೇಕು. ಅದನ್ನು ಬಿಟ್ಟು ಸರ್ಕಾರ ಕಲ್ಲೆಸೆದವರ ರಕ್ಷಣೆಗೆ ನಿಂತಿದೆ. ಕಲ್ಲು ಹೊಡೆದಿರುವುದನ್ನು ಪ್ರಶ್ನಿಸಿದ ಯುವತಿಯ ಮೇಲೆ ಕಾನ್‌ಸ್ಟೇಬಲ್ ಲಾಠಿ ಚಾರ್ಜ್ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಕಾಂಗ್ರೆಸ್ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕುತ್ತಿದೆ. ತುಷ್ಠೀರಣದ ಪರಾಕಾಷ್ಠೆಗೆ ಹೋಗಿ ಹಿಂದು ಧಾರ್ಮಿಕ ಸಂಸ್ಥೆಗಳು, ಧಾರ್ಮಿಕ ಆಚರಣೆ, ಭಾವನೆಗಳನ್ನು ಕೆದಕುವ ದುಷ್ಟ ಶಕ್ತಿಗಳಿಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಮೋಹನ ರಾಮದುರ್ಗ ತಿಳಿಸಿದ್ದಾರೆ.