ಜಿಲ್ಲೆ

ತಡಸ ಪಿಎಸ್​ಐ ಸುಜಾತಾ ಪಾಟೀಲ ಅಮಾನತು

Haveri - Desk - Ganapati Bhat

ಹಾವೇರಿ: ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್ ಠಾಣೆಯ ಸಬ್​ಇನ್​ಸ್ಪೆಕ್ಟರ್ ಸುಜಾತಾ ಪಾಟೀಲ ಅವರನ್ನು ಕರ್ತವ್ಯ ಲೋಪದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ. ಅಕ್ಟೋಬರ್​ನಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ವಾಹನ ಬದಲಾವಣೆ ಮತ್ತು ತನಿಖೆಯಲ್ಲಿ ಎಸಗಿದ ಲೋಪದ ಆರೋಪದ ಮೇರೆಗೆ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದಾವಣಗೆರೆ ಪೂರ್ವ ವಲಯ ಐಜಿಪಿ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ ತಿಳಿಸಿದ್ದಾರೆ.