ಜಿಲ್ಲೆ

ಯೋಧ ದೀಪಕ ಪಾಟೀಲಗೆ ಅಂತಿಮ ವಿದಾಯ

ವಿಠ್ಠಲ ಹಣಮಂತ ಬಾಳೇಕುಂದ್ರಿ

ನಿಪ್ಪಾಣಿ: ತಾಲೂಕಿನ ಭಾಟನಾಗನೂರ ಗ್ರಾಮದ ಯೋಧ ದೀಪಕ ಗೋವಿಂದ ಪಾಟೀಲ (35) ಅವರ ಅಂತ್ಯಕ್ರಿಯೆ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಜಮ್ಮು ಕಾಶ್ಮೀರದ ಹಿಮಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕಳೆದ ಡಿಸೆಂಬರ್​ ತಿಂಗಳಲ್ಲಿ ಅನಾರೋಗ್ಯಕ್ಕೀಡಾಗಿದ್ದರು. ಈ ಹಿನ್ನೆಲೆ ಮಹಾರಾಷ್ಟ್ರದ ಪುಣೆಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಲಿಸದೆ ಶನಿವಾರ ನಿಧನಾಗಿದ್ದರು. ಭಾನುವಾರ ಬೆಳಗ್ಗೆ ಪಾರ್ಥಿವ ಶರೀರ ಗ್ರಾಮಕ್ಕೆ ತಂದು ಮೆರವಣಿಗೆ ಮಾಡಲಾಯಿತು. ದೀಪಕ ಪಾಟೀಲ ಅಮರ ರಹೇ ೂಷಣೆಗಳು ಪ್ರತಿಧ್ವನಿಸಿದವು.

ಯೋಧನ ಸಂಬಂಧಿಕರು, ಅಧಿಕಾರಿಗಳು, ಗಣ್ಯರು, ಗ್ರಾಮಸ್ಥರು ಅಂತಿಮ ದರ್ಶನ ಪಡೆದ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಯೋಧನಿಗೆ ಪತ್ನಿ, ಇಬ್ಬರು ಪುತ್ರಿಯರು, ತಂದೆ&ತಾಯಿ, ಸಹೋದರರು ಇದ್ದಾರೆ.

ಶಾಸಕಿ ಶಶಿಕಲಾ ಜೊಲ್ಲೆ, ಬುಡಾ ಅಧ್ಯಕ್ಷ ಲಕ್ಷ$್ಮಣರಾವ ಚಿಂಗಳೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಂಕಜ ಪಾಟೀಲ, ತಹಸೀಲ್ದಾರ್​, ಪೊಲೀಸ್​ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಬಟಾಲಿಯನ್​ನ ಯೋಧರು ಇದ್ದರು.