ಜಿಲ್ಲೆ

ಕೊನೆಯ ಚುನಾವಣೆ ಎಂದವರೆಲ್ಲಾ ಗೆದ್ದರು!

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಜಿಲ್ಲೆಯ ರಾಜಕಾರಣದಲ್ಲಿ ಬಹುತೇಕ ಹಿರಿಯ ರಾಜಕಾರಣಿಗಳೆಲ್ಲಾ ಗೆದ್ದು ಬೀಗಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದ ನಾಯಕರೆಲ್ಲರೂ ಗೆದ್ದಿರುವುದು ಈ ಚುನಾವಣೆಯ ಮತ್ತೊಂದು ವಿಶೇಷ.

ಶಿರಾ ಕ್ಷೇತ್ರದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ, ತಿಪಟೂರಿನಲ್ಲಿ ಕೆ.ಷಡಕ್ಷರಿ, ತುರುವೇಕೆರೆಯಲ್ಲಿ ಎಂ.ಟಿ.ಕೃಷ್ಣಪ್ಪ ಅವರು ಇಳಿ ವಯಸ್ಸಿನಲ್ಲಿ ವಿಧಾನಸೌಧ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಕಣದಿಂದ ಹಿಂದು ಸರಿದು ಮಗನಿಗೆ ಅವಕಾಶ ಮಾಡಿಕೊಟ್ಟಿದ್ದ ಪಾವಗಡದ ವೆಂಕಟರಮಣಪ್ಪ ಮಗನನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಕುಣಿಗಲ್‌ನಲ್ಲಿ ಇದೇ ಪ್ರಯೋಗ ಮಾಡಿದ್ದ ಮಾಜಿ ಸಚಿವ ಡಿ.ನಾಗರಾಜಯ್ಯ ಯಶಸ್ಸು ಕಾಣಲಿಲ್ಲ.