ಜಿಲ್ಲೆ

ದ.ಕ. ಇಂದು ಕೊನೇ ಲಾಕ್‌ಡೌನ್ ದಿನ

Dakshina Kannada

ಮಂಗಳೂರು: ರಾಜ್ಯದ ಇತರ ಜಿಲ್ಲೆಗಳಲ್ಲಿ ಬುಧವಾರವೇ (ಜು.22) ಲಾಕ್‌ಡೌನ್ ತೆರವಾಗಲಿದ್ದರೂ ದ.ಕ ಜಿಲ್ಲೆಯ ಜನರು ಮಾತ್ರ ಇನ್ನೊಂದು ದಿನ ಕಾಯಬೇಕಿದೆ.

ಈಗಾಗಲೇ ಜಿಲ್ಲಾಧಿಕಾರಿ ಆದೇಶಿಸಿದಂತೆ ಗುರುವಾರ ಜುಲೈ 23ರ ಮುಂಜಾನೆ 5 ಗಂಟೆಯ ವರೆಗೆ ಲಾಕ್‌ಡೌನ್ ಇರಲಿದ್ದು, ಆ ಬಳಿಕ ತೆರವಾಗಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತಮ್ಮ ಭಾಷಣದಲ್ಲಿ ಇನ್ನುಮುಂದೆ ಯಾವ ಜಿಲ್ಲೆಯಲ್ಲಿಯೂ ಲಾಕ್‌ಡೌನ್ ಇರುವುದಿಲ್ಲ ಎಂದು ಖಚಿತವಾಗಿ ತಿಳಿಸಿದ್ದರು. ಅದರ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸ್ಪಷ್ಟನೆ ನೀಡಿದ್ದು, ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 5ರ ನಂತರ ಲಾಕ್‌ಡೌನ್ ಪೂರ್ಣವಾಗಿ ತೆರವಾಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು, ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ 14 ದಿನ ಲಾಕ್‌ಡೌನ್ ವಿಸ್ತರಣೆ ಮಾಡುವಂತೆ ಹೇಳುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಸಚಿವರು ಹೇಳಿದ್ದರು.

ಉಡುಪಿ ಗಡಿ ಸೀಲ್‌ಡೌನ್ ರದ್ದು

ಉಡುಪಿ: ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಗಡಿ ಸೀಲ್‌ಡೌನ್ ರದ್ದುಗೊಂಡಿದೆ, ಆದರೆ ಚೆಕ್‌ಪೋಸ್ಟ್ ಮುಂದುವರಿಯಲಿದೆ. ಅನಗತ್ಯ ವಾಹನ ಓಡಾಟಕ್ಕೆ ಅವಕಾಶ ನೀಡುವಿದಿಲ್ಲ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಬುಧವಾರ ಸರ್ಕಾರಿ ಬಸ್ ಸಂಚಾರ ಆರಂಭಿಸಲಾಗುತ್ತದೆ. ಖಾಸಗಿ ಬಸ್ ಸಂಚಾರ ಬಗ್ಗೆ ಬುಧವಾರ ಸಭೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಅಂತರ್‌ಜಿಲ್ಲಾ ಬಸ್ ಸಂಚಾರ ಬಗ್ಗೆಯೂ ತೀರ್ಮಾನವಾಗಲಿದೆ. ಬಸ್‌ಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಾವಳಿ ಅನುಸರಿಸಬೇಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.