ಗಂಗಾವತಿ ತಾಲೂಕಿನ ಶ್ರೀರಾಮನಗರದ ಪಶು ಚಿಕಿತ್ಸಾಲಯದಲ್ಲಿ ಹಮ್ಮಿಕೊಂಡಿದ್ದ ರೋಗ ಲಸಿಕಾಭಿಯಾನದ ಭಿತ್ತಿ ಪತ್ರವನ್ನು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಸೋಮವಾರ ಬಿಡುಗಡೆಗೊಳಿಸಿದರು. ಪಶುಪಾಲನಾ ಇಲಾಖೆ ಹಿರಿಯ ವೈದ್ಯಾಧಿಕಾರಿ ಅರುಣುಗುರು, ಪಶು ವೈದ್ಯಕೀಯ ಪರಿವೀಕ್ಷಕ ಕೊಂಡಯ್ಯ, ಗ್ರಾಪಂ ಸದಸ್ಯ ರೆಡ್ಡಿ ವೀರರಾಜು, ಪಶುಸಖಿ ಸುಶೀಲಾ ಇತರರಿದ್ದರು. 
ಜಿಲ್ಲೆ

ಲಸಿಕಾ ಅಭಿಯಾನ ಯಶಸ್ಸಿಗೆ ಕೈಜೋಡಿಸಿ

ಗಂಗಾವತಿ: ಪಶುಗಳ ರಕ್ಷಣೆಗೆ ರೈತರು ಮತ್ತು ಸಾಕಣೆದಾರರು ವಿಶೇಷವಾಗಿ ಗಮನಹರಿಸಬೇಕಿದ್ದು, ಲಸಿಕಾ ಅಭಿಯಾನಕ್ಕೆ ನೆರವಾಗುವಂತೆ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ತಾಲೂಕಿನ ಶ್ರೀರಾಮನಗರದ ಪಶು ಚಿಕಿತ್ಸಾಲಯದಲ್ಲಿ ಪಶುಪಾಲನಾ, ಪಶುವೈದ್ಯಕೀಯ ಇಲಾಖೆ ಮತ್ತು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಸೋಮವಾರ ಹಮ್ಮಿಕೊಂಡಿದ್ದ ರೋಗ ಲಸಿಕಾ ಅಭಿಯಾನದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಪರಿಸರ ಸಮತೋಲನ ಕಾಪಾಡುವ ಪಶುಗಳನ್ನು ರಕ್ಷಿಸಬೇಕು. ಅವುಗಳ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷಿಸದೆ ಅಭಿಯಾನಕ್ಕೆ ಸಹಕರಿಸುವ ಮೂಲಕ ಯೋಜನೆ ಯಶಸ್ವಿಗೊಳಿಸುವಂತೆ ಸಲಹೆ ನೀಡಿದರು.

ಪಶುಪಾಲನಾ ಇಲಾಖೆ ಹಿರಿಯ ವೈದ್ಯಾಧಿಕಾರಿ ಅರುಣುಗುರು ಮಾತನಾಡಿ, ಪಶುಗಳ ಆರೈಕೆಯಲ್ಲಿ ಜಾಗೃತರಾಗಬೇಕಿದ್ದು, ಆರೋಗ್ಯದಲ್ಲಿ ಏರುಪೇರಾದರೆ ಪಶು ವೈದ್ಯರನ್ನು ಸಂಪರ್ಕಿಸಬೇಕು. ಪ್ರತಿ ಗ್ರಾಮಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಹಾಲು ಉತ್ಪಾದಕರ ಸಂಘದ ಪ್ರತಿನಿಧಿಗಳಾದ ಪ್ರಸಾದ, ಅಪ್ಪಾರಾವ್ ಇತರರಿದ್ದರು.