ಜಿಲ್ಲೆ

ಅಂಗವಿಕಲರಿಗೆ ಲ್ಯಾಪ್‌ಟಾಪ್ ವಿತರಣೆ

ಸೌಮ್ಯ ಆರ್

ಬದಿಯಡ್ಕ: ಅಂಗವಿಕಲ ಬಹುಮುಖ ಪ್ರತಿಭೆ, ಬಾರಡ್ಕ ನಿವಾಸಿ ಸತೀಶ ಮತ್ತು ರಜಿತಾ ಅವರ ಪುತ್ರಿ ಜಿಶಾಮೋಳ್‌ಗೆ ವಿದ್ಯಾಭ್ಯಾಸದ ಅಗತ್ಯಕ್ಕಾಗಿ ಲ್ಯಾಪ್‌ಟಾಪ್ ನೀಡಲಾಯಿತು. ಭಾನುವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಬದಿಯಡ್ಕ ಬಾಲಗೋಕುಲ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಮತ್ತು ಬದಿಯಡ್ಕ ಅಟಲ್‌ಜಿ ಸೇವಾ ಸಂಘ್ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ನೀಡಿದ ಲ್ಯಾಪ್‌ಟಾಪ್ ಹಸ್ತಾಂತರಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಪೆರುಮುಂಡ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಉದ್ಘಾಟಿಸಿದರು. ಬಾಲಗೋಕುಲದ ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಕಾಸರಗೋಡು ಮತ್ತಿತರರಿದ್ದರು.