ಜಿಲ್ಲೆ

ಹೊಸ ತಂತ್ರಜ್ಞಾನದಿಂದ ಜನತೆಗೆ ಅನುಕೂಲ : ಉಮಾನಾಥ ಕೋಟ್ಯಾನ್ ಹೇಳಿಕೆ

ಸೌಮ್ಯ ಆರ್

ಕಿನ್ನಿಗೋಳಿ: ಕಿನ್ನಿಗೋಳಿಯಲ್ಲಿ ಕೆಲ ತಿಂಗಳಿಂದ ಸಾರ್ವಜನಿಕ ಶೌಚಗೃಹವಿಲ್ಲದೆ ಸಮಸ್ಯೆ ಎದುರಾಗಿತ್ತು, ಇದೀಗ ನೂತನ ಶೌಚಗೃಹದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಗ್ರಾಮದ ಜನತೆಗೆ ಸರ್ಕಾರ ಹೊಸ ತಂತ್ರಜ್ಞಾನ ಆ್ಯಪ್ ಅಭಿವೃದ್ಧಿಪಡಿಸಿದ್ದು ಅದರಿಂದ ಜನರಿಗೆ ಒಂದಿಷ್ಟು ಉಪಯೋಗವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಶೌಚಗೃಹ ಉದ್ಘಾಟನೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

ಮೂಲ್ಕಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ಆಶಾ ಸುವರ್ಣ, ಗ್ರಾಪಂ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ತಾಪಂ ಸದಸ್ಯ ದಿವಾಕರ ಕರ್ಕೇರ, ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶಂಕರ್ ಪ್ರಸಾದ್, ಸ್ಟಾೃನಿ ಪಿಂಟೋ, ಅಭಿಲಾಶ್ ಶೆಟ್ಟಿ ಕಟೀಲು, ಲೋಕಯ್ಯ ಸಾಲ್ಯಾನ್ ಕೊಂಡೇಲ, ಡೋಲಿ ಸಂತುಮಾಯರ್, ಕೇಶವ ಕರ್ಕೇರ, ಪ್ರೇಮರಾಜ ಶೆಟ್ಟಿ, ಪುರಂದರ ಶೆಟ್ಟಿ, ವಿವಿಧ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮ ಮಟ್ಟದಲ್ಲಿ ಆಡಳಿತಾಧಿಕಾರಿಗಳ ಕಡತಗಳು ಬರವಣಿಗೆ ರೂಪದಲ್ಲಿ ಇದ್ದದ್ದು ಮುಂದಕ್ಕೆ ದಾಖಲೀಕರಣವಾಗುತ್ತಿದ್ದು ಹಾಗೂ ಕೆಲಸ ಕಾರ್ಯದಲ್ಲಿ ಕಾರ್ಯದಕ್ಷತೆ ಹೆಚ್ಚಿಸುವ ಸಲುವಾಗಿ ಲ್ಯಾಪ್‌ಟಾಪ್ ಕ್ರೊಮ್ ನೀಡುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಇನ್ನಷ್ಟು ಸೌಲಭ್ಯ ದೊರೆಯಲಿದೆ. ಶ್ರೀಧರ ಮುಂದಲಮನಿ, ಮೂಲ್ಕಿ ತಹಸೀಲ್ದಾರ್