ಜಿಲ್ಲೆ

ಲ್ಯಾಪ್​ಟಾಪ್​ ವಿತರಣೆ

Dharwada - Vikram Nadiger

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆ (2022-23ನೇ ವರ್ಷ)ಯಲ್ಲಿ ಧಾರವಾಡ ತಾಲೂಕಿಗೆ ಮೊದಲ 3 ಸ್ಥಾನ ಪಡೆದ ವಿದ್ಯಾರ್ಥಿಗಳಾದ ನಾಜ್​ ಬಳ್ಳಾರಿ, ಕಾವ್ಯಾ ಕುಂಬಾರ, ಸಮೀನಾ ನವಲೂರ ಅವರಿಗೆ ಶಾಸಕ ಅರವಿಂದ ಬೆಲ್ಲದ ಶುಕ್ರವಾರ ಲ್ಯಾಪ್​ಟಾಪ್​ ವಿತರಿಸಿದರು.
ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಫ್​. ಜಾವೂರ, ಆರ್​.ಎನ್​. ಶೆಟ್ಟಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದಿಮಠ, ಮಾದಾರಮಡ್ಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಲಿಂಗರಾಜ ಅರ್ಕಸಾಲಿ, ಮಹಮ್ಮದ್​ ಯುನೀಸ್​ ಛಡಿದಾರ್​, ಪಾಲಕರು, ಇತರರು ಇದ್ದರು.