ಜಿಲ್ಲೆ

ವೈದ್ಯ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ವಿತರಣೆ: ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಸಾಮಾಜಿಕ ಸೇವೆ

ಕೆ.ಎನ್.ರಾಘವೇಂದ್ರ

ಶ್ರೀರಂಗಪಟ್ಟಣ: ವೈದ್ಯಕೀಯ ಕಾಲೇಜಿಗೆ ಸರ್ಕಾರಿ ಕೋಟಾದಲ್ಲಿ ಪ್ರವೇಶಾತಿ ಪಡೆದಿರುವ ತಾಲೂಕಿನ ಗಣಂಗೂರು ಗ್ರಾಮದ ಮಂಜುನಾಥ್ ಅವರ ಮಗ ಜಿ.ಎಂ.ಕುಶಾಲ್ ಅವರಿಗೆ ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು.

ಬಳಿಕ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಯುವ ನಾಯಕ ಇಂಡುವಾಳು ಎಸ್.ಸಚ್ಚಿದಾನಂದ, ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧೆಯೊಡ್ಡುವುದು ಕಷ್ಟಸಾಧ್ಯ. ಕುಶಾಲ್ ಅವರು ವೈದ್ಯಕೀಯ ವಿಭಾಗದಲ್ಲಿ ಉಚಿತ ಪ್ರವೇಶಾತಿ ಪಡೆದಿರುವುದು ಶ್ಲಾಘನೀಯ. ಇಂತಹ ಗ್ರಾಮೀಣ ಪ್ರತಿಭೆಗಳು ಹೆಚ್ಚು ಹೆಚ್ಚಾಗಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಪರಿಣಿತಿ ಹೊಂದುವ ಮೂಲಕ ದೇಶಕ್ಕೆ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು. ತಾವು ಹುಟ್ಟಿ ಬೆಳೆದ ಗ್ರಾಮ ಮತ್ತು ಜನರ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮದ ಮುಖಂಡರಾದ ನಂಜೇಗೌಡ, ಬಾಬು, ಬಸವರಾಜು, ರಂಜಿತ್, ಸತೀಶ್, ಬೋರೇಗೌಡ, ಬಾಲು, ರಾಮೇಗೌಡ, ಮಧು, ಬಲ್ಲೇನಹಳ್ಳಿ ಸಂತೋಷ್ ಇತರರಿದ್ದರು.