ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸ್ಟೇಷನ್ ರಸ್ತೆಯಲ್ಲಿರುವ ಪ್ರಶಾಂತ ಆಸ್ಪತ್ರೆ ಹಾಗೂ ಐವಿಎ-ï ಕೇಂದ್ರ ಹಾಗೂ ಧಾರವಾಡ ಐಎಂಎ ಜಂಟಿಯÁಗಿ 3ಡಿ ಲ್ಯಾಪ್ರೋಸ್ಕೋಪ್ ಕುರಿತು ಜ. 26ರಂದು ಬೆಳಗ್ಗೆ 11ಕ್ಕೆ ನಗರದ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರಾದ ಡಾ. ಸೌಭಾಗ್ಯ ಕುಲಕರ್ಣಿ ಹೇಳಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ 3ಡಿ ಲ್ಯಾಪ್ರೋಸ್ಕೋಪ್ ತಂತ್ರಜ್ಞಾನ ಬಂದಿದೆ. ವಿವಿಧ ರೋಗಗಳಿಗೆ ಈ ಚಿಕಿತ್ಸೆ ಅಗತ್ಯವಾಗಿದೆ. ವೈದ್ಯರಿಗೂ ಮಾಹಿತಿ ನೀಡುವ ಉದ್ದೇಶದಿಂದ ಕಾಯÁðಗಾರ ಆಯೋಜಿಸಲಾಗಿದೆ. ಅತಿಥಿಗಳಾಗಿ ಡಾ. ಕೆ.ಎಸ್. ಹರಿನಾಥ, ಡಾ. ರಾಮಲಿಂಗಪ್ಪ ಅಂಟರತಾನಿ, ಡಾ. ಹಂಗರಗಾ ಯು.ಎಸ್., ಡಾ. ರತ್ನಮಾಲಾ ದೇಸಾಯಿ ಹಾಗೂ ಡಾ. ಎಂ.ಜಿ. ಹಿರೇಮಠ ಭಾಗವಹಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಕೋಮಲ ಕುಲಕರ್ಣಿ ಇದ್ದರು.