ಭಾರತದ ಭಾಷಾ ನೀತಿಯನ್ನು ಮರು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕನಕಗಿರಿಯಲ್ಲಿ ಕರವೇ(ನಾರಾಯಣ ಗೌಡ) ಬಣದ ಪದಾಧಿಕಾರಿಗಳು ತಹಸೀಲ್ದಾರ್ ರವಿ ಅಂಗಡಿ ಮನವಿ ಸಲ್ಲಿಸಿದರು.  
ಜಿಲ್ಲೆ

ಭಾಷಾ ನೀತಿ ಮರು ಪರಿಶೀಲಿಸಲು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

Koppal

ಕನಕಗಿರಿ: ಭಾರತದ ಭಾಷಾ ನೀತಿಯನ್ನು ಮರು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ(ನಾರಾಯಣ ಗೌಡ) ಬಣದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ರವಿ ಅಂಗಡಿ ಮನವಿ ಸಲ್ಲಿಸಿದರು.

ನಂತರ ಕರವೇ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ ಬಿಜ್ಜಳ ಮಾತನಾಡಿ, ಕೇಂದ್ರ ಸರ್ಕಾರ ಅಂಗ್ಲ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿರುವುದು ದೇಶದ ಇತರ ಭಾಷೆಗಳಿಗೆ ಹಾಗೂ ಭಾಷಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ.

ಭಾರತ ಬಹು ಭಾಷೆ, ಸಂಸ್ಕೃತಿ ಹಾಗೂ ಧರ್ಮಗಳ ನಾಡು. ಭಾಷೆಗಳಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಆದ್ದರಿಂದ ಅಸಮಾನತೆಯನ್ನು ತೊಡೆದು ಹಾಕಿ ಸಮಾನತೆಯನ್ನು ಎತ್ತಿ ಹಿಡಿಯಲು ಹಿಂದಿ ದಿವಸ್, ಹಿಂದಿ ಸಪ್ತಾಹ ಮತ್ತು ಹಿಂದಿ ಪಕ್ವಾಡಗಳಂತಹ ಅರ್ಥಹೀನ ಅಸಮಾನತೆಯನ್ನು ಹೇರುವ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಭಾಷಾ ನೀತಿಯನ್ನು ಮರು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ದೇಸಾಯಿಗೌಡ ಡಿ.ಪಾಟೀಲ, ಮಂಜುನಾಥ ಪತ್ತಾರ, ಹನುಮೇಶ ವಾಲೇಕಾರ, ಮಹ್ಮದ ರಫಿ, ಶಿವಶಂಕರಪ್ಪ ಇದ್ದರು.