ಜಿಲ್ಲೆ

ದತ್ತಿ ಉಪನ್ಯಾಸದಿಂದ ಭಾಷಾಭಿಮಾನ ಜಾಗೃತಿ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ದತ್ತಿ ದಾನಿಗಳ ಹೆಸರು ಅವರು ಮಾಡಿರುವ ಕಾರ್ಯಗಳ ಮೂಲಕ ಶಾಶ್ವತವಾಗಿರಲಿದೆ ಎಂದು ಸಾಹಿತಿ ಡಾ.ಎಚ್.ಎಂ.ಮರಳಸಿದ್ದಯ್ಯ ಪಟೇಲ್ ಹೇಳಿದರು.

ತಾಲೂಕಿನ ರಂಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಹಳ್ಳಿಕೇರಿ ಬಸಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರೃ ಹೋರಾಟಗಾರರಾಗಿದ್ದ ಹಳ್ಳಿಕೇರಿ ಬಸಪ್ಪ ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರು ನಡೆದ ಹಾದಿಯಲ್ಲೇ ಅವರ ಪುತ್ರ ಶ್ರೀಕಂಠಮೂರ್ತಿ ಸಾಗುತ್ತಿದ್ದು, ಅನೇಕ ವರ್ಷಗಳಿಂದ ತಂದೆ ಹೆಸರಿನಲ್ಲಿ ದತ್ತಿ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ರಾಷ್ಟ್ರಭಕ್ತಿಯಲ್ಲಿ ರಂಗೇನಹಳ್ಳಿ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಮುಖ್ಯಶಿಕ್ಷಕ ಎಂ.ಶ್ರೀನಿವಾಸ್, ಸಹ ಶಿಕ್ಷಕರಾದ ಬಸವರಾಜ್, ಪುಷ್ಪಾ, ತಾಲೂಕು ಕಸಪಾ ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ್, ತಾಲೂಕು ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸುನಿತಾ, ಪ್ರಮುಖರಾದ ಕೆ.ಎಸ್.ಶಿವಣ್ಣ, ಶ್ರೀಕಂಠಮೂರ್ತಿ, ಸಿ.ಚಕ್ರವರ್ತಿ, ಮುಹಿಬುಲ್ಲಾ ಮತ್ತಿತರರಿದ್ದರು.