ಜಿಲ್ಲೆ

ಲಾಭದಾಸೆಗೆ 10.90 ಲಕ್ಷ ರೂ. ಕಳೆದುಕೊಂಡ ಭೂಪ

ಹುಬ್ಬಳ್ಳಿ: ಫೇಸ್‌ಬುಕ್ ನೋಡುವ ವೇಳೆ ಬಂದ ಶೇರ್ ಮಾರುಕಟ್ಟೆ ಜಾಹೀರಾತು ನೋಡಿ ಲಾಭದಾಸೆಗೆ ಲಿಂಕ್ ಕ್ಲಿಕ್ ಮಾಡಿದ ಮಹಾಶಯರೊಬ್ಬರು ಬರೋಬ್ಬರಿ 10.90 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.

ನಗರದ ನಿಂಗಪ್ಪ ಎಸ್. ಎಂಬುವವರು ಹಣ ಕಳೆದುಕೊಂಡವರು. ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ವಾಟ್ಸ್‌ಆ್ಯಪ್ ಖಾತೆಗೆ ಸೇರಿದ್ದಾರೆ. ಅದರಲ್ಲಿ ಖಾತೆ ಹೊಂದಿರುವ ಪ್ರಿಯಾ ದೇಸಾಯಿ ಎಂಬಾಕೆ ಮಾರುಕಟ್ಟೆಯಲ್ಲಿನ ಲಾಭದಾಸೆ ತೋರಿಸಿದ್ದಾಳೆ. ಶೇ. 15ರಿಂದ 20ರಷ್ಟು ಲಾಭ ನೀಡುವುದಾಗಿ ನಂಬಿಸಿದ್ದಾಳೆ. ತಾವು ಐಐಎಫ್‌ಎಲ್ ಕಂಪನಿ ಪ್ರತಿನಿಧಿ ಎಂದು ತಿಳಿಸಿ, ನನ್ನ ವಿವಿಧ ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ ಎಂದು ನಿಂಗಪ್ಪ ಸಿಇಎನ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.