ಜಿಲ್ಲೆ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾವು ಕಚ್ಚಿ ಸಾವು

Haveri - Kariyappa Aralikatti

ಹಾನಗಲ್ಲ: ಜಮೀನಿನಲ್ಲಿ ಕಳೆ ತೆಗೆಯುತ್ತಿದ್ದ ಸಮಯದಲ್ಲಿ ಹಾವು ಕಚ್ಚಿ ಕೃಷಿ ಮಹಿಳೆ ಮೃತಪಟ್ಟ ಘಟನೆ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಗುರುವಾರ ನಡೆದಿದೆ.
ನಾಗವೇಣಿ ದುಂಡಪ್ಪ ಗಂಜೀಗಟ್ಟಿ (53) ಮೃತ ಮಹಿಳೆ.
ಇವರು ಜಮೀನಿನಲ್ಲ ಕಳೆ ತೆಗೆಯುತ್ತಿದ್ದ ಸಮಯದಲ್ಲಿ ಹಾವು ಕಚ್ಚಿದೆ. ಇದರಿಂದ ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.