ಶಿಗ್ಗಾಂವಿ: ಜಮೀನುವೊಂದರ ಬಾವಿಯಲ್ಲಿ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಗ್ರಾಮದ ಈರಪ್ಪ ನಿಂಗಪ್ಪ ಗಂಗಣ್ಣನವರ (25) ಮೃತ ವ್ಯಕ್ತಿ.
ಈತ ಗ್ರಾಮದ ಹೊರವಲಯದ ಜಮೀನುವೊಂದರ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಆದರೆ, ಈತನ ಸಾವಿನಲ್ಲಿ ಸಂಶಯವಿದ್ದು, ಈ ಕುರಿತು ತನಿಖೆ ನಡೆಸುವಂತೆ ಮೃತನ ಸಂಬಂಧಿಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.