ಜಿಲ್ಲೆ

ಜಮೀನಿನಲ್ಲಿದ್ದ ನೀರಿನ ಗುಂಡಿಯಲ್ಲಿ ಬಿದ್ದು ವೃದ್ಧ ಸಾವು

Haveri - Kariyappa Aralikatti

ಸವಣೂರ: ಮೇಕೆ ಕಾಯಲು ಹೋದ ವೃದ್ಧರೊಬ್ಬರು ಜಮೀನಿನಲ್ಲಿ ನೀರಿನ ಗುಂಡಿಯಲ್ಲಿ ಕೈ ಕಾಲು ತೊಳೆಯಲು ಹೋಗಿ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕುಣಿಮೆಳ್ಳಿಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಹುಸೇನಸಾಬ ರಾಜೇಸಾಬ ಅರಬಗೊಂಡ (65) ಮೃತ ವೃದ್ಧ.
ಇವರು ಮೇಕೆ ಕಾಯಲು ಹೋದಾಗ ಜಮೀನುವೊಂದರಲ್ಲಿನ ನೀರಿನ ಗುಂಡಿಯಲ್ಲಿ ಮೈ ಕೈ ತೊಳೆದುಕೊಳ್ಳಲು ಹೋಗಿದ್ದಾರೆ. ಆಗ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.