ಕಂಪ್ಲಿ ತಾಲೂಕಿನ ನೆಲ್ಲೂಡಿ ಗ್ರಾಪಂ.ಪಿಡಿಒ ಹಾಲಹರವಿ ಶೇಷಗಿರಿಗೆ ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಕರಿಯಪ್ಪ ಗುಡಿಮನಿ, ವಸಂತರಾಜ ಕಹಳೆ, ನೀಲಪ್ಪ ಪೇಂಟರ್, ಈ.ಧನಂಜಯ, ಪಾರ್ವತಿ, ರೇಣುಕಾ ಇತರರಿದ್ದರು. 
ಜಿಲ್ಲೆ

ಭೂಮಿ ವಶಪಡಿಸಿಕೊಳ್ಳಲು ಮನವಿ

Kopala - Desk - Eraveni

ಕಂಪ್ಲಿ: ತಾಲೂಕಿನ ನೆಲ್ಲೂಡಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 133/ಬಿ1ರ 4.19ಎಕರೆ ಭೂಮಿ ವಶಪಡಿಸಿಕೊಳ್ಳಲು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಠರಾವ್ ಮಾಡುವಂತೆ ಒತ್ತಾಯಿಸಿ, ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು ಮಂಗಳವಾರ ಗ್ರಾಪಂ. ಕಚೇರಿಯಲ್ಲಿ ಪಿಡಿಒ ಹಾಲಹರವಿ ಶೇಷಗಿರಿಗೆ ಮನವಿ ಸಲ್ಲಿಸಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ಮಾತನಾಡಿ, 4.19ಎಕರೆ ಸರ್ಕಾರಿ ಜಮೀನನ್ನು ಗ್ರಾಮಾಡಳಿತ ವಶಪಡಿಸಿಕೊಂಡು ಅಂಬೇಡ್ಕರ್ ಭವನ, ಆಧುನಿಕ ಗ್ರಂಥಾಲಯ, ಸಾರ್ವಜನಿಕ ಶೌಚಗೃಹ,

ಎಎನ್‌ಎಂ ಕಟ್ಟಡ ನಿರ್ಮಾಣಕ್ಕೆ ಹಾಗೂ ಗ್ರಾಮದ ಮಾದಿಗ ಸಮುದಾಯದವರ ವಸತಿ ರಹಿತರಿಗೆ ಶೇ.70ರಷ್ಟು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ತಲಾ ಶೇ.5ರಷ್ಟು ಭೂಮಿ ಮೀಸಲಿರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಜನಶಕ್ತಿ ಜಿಲ್ಲಾ ಮುಖಂಡ ವಸಂತರಾಜ ಕಹಳೆ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ನೀಲಪ್ಪ ಪೇಂಟರ್, ಪದಾಧಿಕಾರಿ ಈ.ಧನಂಜಯ, ಗ್ರಾಪಂ.ಸದಸ್ಯೆ ಜ್ಯೋತಿ, ಪಾರ್ವತಿ, ರೇಣುಕಾ, ಹುಲಿಗೆಮ್ಮ, ರಾಮಣ್ಣ, ವೀರೇಶ್ ಇತರರಿದ್ದರು.