ಹುಬ್ಬಳ್ಳಿ : ಸಿಲೆಂಡರ್ ಸ್ಪೋಟಗೊಂಡು 8 ಜನ ಅಯ್ಯಪ್ಪಮಾಲಾಧಾರಿಗಳ ಸಾವಿಗೀಡಾದ ಇಲ್ಲಿನ ಅಚ್ಚವನ ಕಾಲನಿಯ ಕಟ್ಟಡಕ್ಕೆ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸ್ಪೋಟಗೊಂಡ ಕಟ್ಟಡದ ಸಮೀಪ ಹೊಸ ಸಮುದಾಯ ಭವನ ನಿರ್ವಣಕ್ಕೆ ಅಂದಾಜು 3 ಗುಂಟೆ ಜಾಗವನ್ನು ಇದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಿದ ಆಯುಕ್ತರು, ಈ ತಿಂಗಳೊಳಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹೊಸ ಸಮುದಾಯ ಭವನ ಕಟ್ಟಡ ನಿರ್ವಣಗೊಂಡ ಬಳಿಕ ಸಿಲೆಂಡರ್ ಸ್ಪೋಟಗೊಂಡ ಹಳೇಯ ಕಟ್ಟಡ ನೆಲಸಮಗೊಳಿಸುವುದಾಗಿ ತಿಳಿಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ಪಾಲಿಕೆ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ, ಕಾರ್ಯನಿರ್ವಾಹಕ ಇಂಜಿನಿಯರ್ ಆರ್. ವಿಜಯಕುಮಾರ ಹಾಗೂ ಇತರರು ಹಾಜರಿದ್ದರು.