ಜಿಲ್ಲೆ

ಕುಸಿಯುವ ಭೀತಿಯಲ್ಲಿ ಸರ್ಕಾರಿ ಶಾಲಾ ಕಟ್ಟಡ

Uttara Kannada - Subash Hegde

ಭಟ್ಕಳ: ತಾಲೂಕಿನ ಕೊರಗರ ಕೇರಿ ಕೋಟ ಜಟಕೇಶ್ವರ ದೇವಸ್ಥಾನದ ಕುಸಿದಿದ್ದು, ಪಕ್ಕದ ಸರ್ಕಾರಿ ಪ್ರಾಥಮಿಕ ಶಾಲೆಗೂ ಕುಸಿಯುವ ಭೀತಿ ಎದುರಾಗಿದೆ.
ಆದರೆ, ಘಟನೆ ನಡೆದು ದಿನ ಕಳೆದರೂ ಅಧಿಕಾರಿಗಳು ಬಾರದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆಗಾಗಿ ಕೋಟ ಜಟಕೇಶ್ವರ ದೇವಸ್ಥಾನ ತೆರವು ಮಾಡಲಾಗಿತ್ತು. ಸಣ್ಣ ಕಟ್ಟಡದಲ್ಲಿ ದೇವರನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ಹೊಸ ದೇವಸ್ಥಾನ ನಿರ್ಮಾಣಕ್ಕೆ‌ ಸಿದ್ಧತೆ ನಡೆಸಲಾಗಿತ್ತು. ಆದರೆ, ದೇವರನ್ನು ಇಟ್ಟಿದ್ದ ಕೋಣೆ ಶುಕ್ರವಾರ ಕುಸಿದಿದೆ. ಅಲ್ಲದೇ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಕುಸಿಯುವ ಭೀತಿಯಲ್ಲಿದೆ. ಇನ್ನೊಂದು ಮನೆಗೂ ಆತಂಕವಿದೆ.